ನೇಣು ಬಿಗಿದುಕೊಂಡು ಮೂರ್ಚೆ ರೋಗಿ ಆತ್ಮಹತ್ಯೆ
ಗುಬ್ಬಿ: ಮೂರ್ಚೆ ರೋಗಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗುಬ್ಬಿ ತಾಲೂಕಿನ ಅಮ್ಮನಘಟ್ಟ ಗ್ರಾಮದ ಉದಯಕುಮಾರ್ (38) ಆತ್ಮಹತ್ಯೆ ಮಾಡಿಕೊಂಡಾತ. ಪತ್ನಿ 2 ನೇ ಮಗುವಿನ ಹೆರಿಗೆಗೆಂದು ತವರಿಗೆ ಹೋಗಿದ್ದಾಳೆ. ಈತ ಮದುವೆಯಾಗಿ ವರ್ಷದೊಳಗೆ ತಂದೆ ಹಾಗೂ ತಾಯಿಯಿಂದ ಬೇರೆಯಾಗಿ ತೋಟದ ಒಂಟಿ ಮನೆಯಲ್ಲಿ ಮಾಸವಿದ್ದ. ಮೂರ್ಚೆ ರೋಗಿಯಾಗಿದ್ದ ಈತ 10 ದಿನಗಳ ಹಿಂದೆಯೇ ತೋಟದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದನೆ. ಇಂದು ಬೆಳಿಗ್ಗೆ ತೋಟಕ್ಕೆ ಹೋಗಿದ್ದ ವ್ಯಕ್ತಿಯೊಬ್ಬರು ದುರ್ವಾಸನೆ ಬರುತ್ತಿದ್ದುದನ್ನು ಗಮನಿಸಿ ಮನೆಯ ಬಾಗಿಲು ಒಡೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆಯಾಗಿದೆ. ಗುಬ್ಬಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.