ರು. 1 ಕೋಟಿ ವೆಚ್ಚದಲ್ಲಿ ಮೂರು ಗ್ರಾಮಗಳ ರಸ್ತೆ ಕಾಮಗಾರಿಗೆ ಶಾಸಕ ಕೃಷ್ಣಪ್ಪ ಚಾಲನೆ
ಕ.ಪ್ರ. ವಾರ್ತೆ ತುರುವೇಕೆರೆ ಮಾ.17
ತಾಲೂಕಿನ ದಂಡಿನಶಿವರ ಹೋಬಳಿಗಳಾದ ಸಿದ್ದಾಪುರ, ಅಂಬಿಕಾ ನಗರ ಹಾಗೂ ಹೊಸೂರು ಗ್ರಾಮಗಳಿಗೆ ಸೂಕ್ತ ಡಾಂಬರು ಹಾಗೂ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣ ಮಾಡುವ ಸಲುವಾಗಿ ಸುಮಾರು 1 ಕೋಟಿ ರು. ವೆಚ್ಚದ ನಮ್ಮ ಊರು ನಮ್ಮ ರಸ್ತೆ ಕಾಮಗಾರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.
ತಾಲೂಕಿನ ಹೊಸೂರು ಗ್ರಾಮದಲ್ಲಿ ಸುಮಾರು 300 ಮೀಟರ್ನಷ್ಟು ಕಾಂಕ್ರೀಟ್ ರಸ್ತೆಯನ್ನು ಹಾಗೂ ಚರಂಡಿಯನ್ನು ಸುಮಾರು 29.40 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗುವುದು. ಅಂಬಿಕಾನಗರದಲ್ಲಿ ಸುಮಾರು 500 ಮೀಟರ್ನಷ್ಟು ರಸ್ತೆಯನ್ನು ಡಾಂಬರು ಹಾಗೂ ಕಾಂಕ್ರೀಟ್ನಲ್ಲಿ ನಿರ್ಮಾಣ ಮಾಡಲಾಗುವುದು. ಇದರ ಅಂದಾಜು ವೆಚ್ಚ ಸುಮಾರು 31.5 ಲಕ್ಷ ರು. ಗಳು, ಸಿದ್ದಾಪುರದಲ್ಲಿ 1 ಕಿ ಮೀನಷ್ಟು ರಸ್ತೆಯನ್ನು ಡಾಂಬರು ಹಾಗೂ ಕಾಂಕ್ರೀಟ್ನಲ್ಲಿ ನಿರ್ಮಾಣ ಮಾಡಲಾಗುವುದು. ಇದರ ವೆಚ್ಚ ಸುಮಾರು 46.42 ಲಕ್ಷ ರು.ಗಳು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ದಂಡಿನಶಿವರ ಗ್ರಾಮ ಪಂಚಾಯ್ತಿ ಸದಸ್ಯ ಕುಮಾರ್, ಹೊನ್ನೇಗೌಡ ಮೊದಲಾದವರು ಭಾಗವಹಿಸಿದ್ದರು.