ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದರೋಡೆ, ಅಪಹರಣ, ಹಲ್ಲೆ ಪ್ರಕರಣ ಪತ್ತೆ: 7 ಮಂದಿ ಬಂಧನ

Parashurama
Updated On : 19 Mar 2013, 10:19 am

ಕ.ಪ್ರ.ವಾರ್ತೆ ್ಣ ತುಮಕೂರು ್ಣ ಮಾ. 19
ದರೋಡೆ, ಅಪಹರಣ ಮತ್ತಿತರೆ ಪ್ರಕರಣವನ್ನು ಭೇದಿಸಿರುವ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ.
ಮಧುಗಿರಿ ಉಪವಿಭಾಗದ ವೈ.ಎನ್. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಮಾರ್ಚ್ 9 ರಂದು ಪ್ರಕರಣಮೊಂದು ದಾಖಲಾಗಿದ್ದು ಅದರಂತೆ ಆರೋಪಿಗಳು 4 ಮೊಬೈಲ್ ಸೇರಿದಂತೆ 40,300 ರು. ಮೌಲ್ಯದ ನಗದು, ಚಿನ್ನದ ಸರವನ್ನು ದರೋಡೆ ಮಾಡಿಕೊಂಡು ತಲೆಮರೆಸಿಕೊಂಡಿದ್ದರು.  
ಈ ಸಂಬಂಧ ಎಸ್ಪಿ ರಮಣಗುಪ್ತ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹನುಮಂತರಾಯ ಅವರ ಮಾರ್ಗದರ್ಶನದಲ್ಲಿ ಡಾ. ಮಧುಗಿರಿ ಡಿವೈಎಸ್ಪಿ ಸೌಮ್ಯಲತಾ ಎಸ್.ಕೆ. ಡಿವೈಎಸ್‌ಪಿ ಮಧುಗಿರಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ವಿಶೇಷ ತಂಡದ ತಿರುಮಣಿ ಸಿಪಿಐ ಎಂ.ಎಂ. ಪಾಷ ಹಾಗೂ ಪಿಎಸ್‌ಐಗಳಾದ ಅಮರೇಶ್ ಗೌಡ, ಕಿರಣ್‌ಕುಮಾರ ರವರು ದರೋಡೆ ಪ್ರಕರಣದ ಒಟ್ಟು 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ವೆಂಕಟೇಶ, ಪ್ರಸನ್ನ, ಮಲ್ಲಿಕಾರ್ಜುನ, ನಾಗರಾಜ, ಮೋಹನ, ಗ್ಯಾಸ್ ಮಲ್ಲಿಕಾರ್ಜುನ, ಮಾರುತಿ ಅವರನ್ನು ಪಾವಗಡ ತಾಲೂಕಿನ ನಾಗಲಮಡಿಕೆ ಹಾಗೂ ಅನಂತಪುರ ಟೌನ್, ಕೃಷ್ಣಾಪುರಂ ಬೆಟ್ಟದಲ್ಲಿ ಬಂಧಿಸಿ ಅವರಿಂದ 2 ಉಂಗುರ, 4  ಮೊಬೈಲ್, ಹಾಗೂ 3 ಏರ್‌ಗನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments