ನೀರಿಗಾಗಿ ಪ್ರತಿಭಟನೆ
ಚಾಮರಾಜನಗರ: ನಗರಸಭಾ ವ್ಯಾಪ್ತಿಯ ಸೋಮವಾರಪೇಟೆಯ 1 ಮತ್ತು 2ನೇ ವಾರ್ಡಿಗೆ 15 ದಿನಗಳಿಂದ ಕುಡಿಯುವ ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಇದರಿಂದ ರೊಚ್ಚಿಗೆದ್ದ ಜನರು ಮಂಗಳವಾರ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ ಹಾಗೂ ನಗರಸಭಾ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
15 ದಿನಗಳಿಂದ ನೀರಿಲ್ಲದೆ ತೀವ್ರ ಸಮಸ್ಯೆಯಾಗಿದೆ. ಪರಿಹಾರ ಕೇಳಿದರೆ ಅಧಿಕಾರಿಗಳು ಇಂದು ಮತ್ತು ನಾಳೆ ಎಂಬ ಉತ್ತರ ನೀಡುತ್ತಾರೆ. ನಗರಸಭಾ ಎಂಜಿನಿಯರ್ ಜಗದೀಶ್ ಅವರಂತೂ ಬೇಜವಾಬ್ದಾರಿ ಉತ್ತರ ನೀಡುತ್ತಲೇ ಬಂದಿದ್ದಾರೆ. ನಗರ ಪ್ರದೇಶಕ್ಕೆ 3 ದಿನಕ್ಕಾದರೂ ನೀರು ಕೊಡುತ್ತಿದ್ದಾರೆ. ನಮಗೆ 4 ದಿನಕ್ಕೊಮ್ಮೆಯಾದರೂ ನೀರು ಬೇಡವೇ? ನಾವೇನು ಮನುಷ್ಯರಲ್ಲವೇ? ಎಂದು ಕಿಡಿಕಾರಿದರು. ಎಂಜಿನಿಯರ್ ಜಗದೀಶ್ ಅವರನ್ನು ಅಮಾನತುಪಡಿಸಬೇಕೆಂದು ಆಗ್ರಹಿಸಿದರು. ರಾಜಪ್ಪ, ಎನ್.ವೃಷಬೇಂದ್ರಸ್ವಾಮಿ, ನಂದೀಶ್, ಅನಿಲ್ಕುಮಾರ್, ಗುರುಪ್ರಸಾದ್, ಕೃಷ್ಣಪ್ಪ, ಸುಂದ್ರ, ಮಹೇಶ್ಕುಮಾರ್ ಪ್ರತಿಭಟನೆಯಲ್ಲಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.