ನ್ಯಾನೋ ಕಥೆಗಳು ಪರಿಣಾಮಕಾರಿಯಾಗಿ ಸಾಹಿತ್ಯ ಪ್ರಿಯರನ್ನು ತಲುಪುತ್ತಿದೆ
ತುಮಕೂರು: ನ್ಯಾನೋ ಕಥೆಗಳು ಪರಿಣಾಮಕಾರಿಯಾಗಿ ಹಾಗೂ ಶೀಘ್ರವಾಗಿ ಸಾಹಿತ್ಯ ಪ್ರಿಯರನ್ನು ತಲುಪುತ್ತಿದೆ ಎಂದು ವಿಮರ್ಶಕ ಕೆ.ಪಿ. ನಟರಾಜ್ ಅಭಿಪ್ರಾಯಪಟ್ಟರು. ಅವರು ಇಲ್ಲಿನ ತ್ರಿನೇತ್ರ ನೃತ್ಯ ಶಾಲೆಯಲ್ಲಿ ಆಯೋಜಿಸಲಾಗಿದ್ದ ಗೋಮಿನಿ ಪ್ರಕಾಶನ ಪ್ರಕಟಿಸಿರುವ ವಿ. ಗೋಪಕುಮಾರ್ ಅವರ ನ್ಯಾನೋ ಕಥೆಗಳ ಸಂಕಲನ ಬೆಳದಿಂಗಳು ಮತ್ತು ಮಳೆ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಸಾಹಿತ್ಯದಲ್ಲಿ ಸಾಮಾನ್ಯವಾಗಿ ಕಥಾ ಪ್ರಕಾರದಲ್ಲಿ ಮಿಂಚನ್ನು ವಿಸ್ತರಿಸಿ ಬರೆದರೆ ವಿ. ಗೋಪಕುಮಾರ್ ಅವರು ತಮ್ಮ ಬೆಳದಿಂಗಳು ಮತ್ತು ಮಳೆ ಸಂಕಲನದಲ್ಲಿ ಮಿಂಚನ್ನು ಹಿಡಿದಿಟ್ಟಿದ್ದಾರೆ ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.