ಯಳನಡು ಸಿದ್ದರಾಮೇಶ್ವರ ಸ್ವಾಮಿ ವಜ್ರಸೇವಾ ಮಹೋತ್ಸವಕ್ಕೆ ತೆರೆ
ಕ.ಪ್ರ.ವಾರ್ತೆ ್ಣ ಹುಳಿಯಾರು ್ಣ ಮಾ. 19
ಸಮೀಪದ ಇತಿಹಾಸ ಪ್ರಸಿದ್ಧ ಸುಕ್ಷೇತ್ರ ಯಳನಡು ಗ್ರಾಮದಲ್ಲಿ ನೆಲೆಸಿರುವ ಶ್ರೀ ಸಿದ್ದರಾಮೇಶ್ವರ ಸ್ವಾಮಿಯ ವಜ್ರಸೇವಾ ಮಹೋತ್ಸವ ಮಾ.13ರಿಂದ ಮಾ.18ರವರೆಗೆ ಆರು ದಿನಗಳ ಕಾಲ ನಡೆಯಿತು. ಸೋಮವಾರ ರಾತ್ರಿ ನಡೆದ ಸ್ವಾಮಿಯ ನಡೆಮುಡಿ ಉತ್ಸವದೊಂದಿಗೆ ವಜ್ರಸೇವಾ ಮಹೋತ್ಸವಕ್ಕೆ ವೈಭವದ ತೆರೆ ಎಳೆಯಲಾಯಿತು.
ವಜ್ರಸೇವಾ ಮಹೋತ್ಸವದ ಅಂಗವಾಗಿ ಸಿದ್ದರಾಮೇಶ್ವರ ಸ್ವಾಮಿಯು ಕರಿಯಮ್ಮದೇವಿ, ಭಟ್ಟರಹಳ್ಳಿಸಿದ್ದರಾಮೇಶ್ವರ ಸ್ವಾಮಿ, ಬಂದಮ್ಮ ದೇವರುಗಳೊಂದಿಗೆ ಬಂಗಾರದ ಪಲ್ಲಕ್ಕಿ ಉತ್ಸವ, ಹಣ್ಣುಕಾಯಿ ಸೇವೆ, ದಶರಥರಾಮೇಶ್ವರ ವಜ್ರದಲ್ಲಿ ಗಂಗಾಸ್ನಾನ, ಸಹಸ್ರಬಿಲ್ವಾರ್ಚನೆ, ತಪಸ್ಸಾಮ್ರಾಜ್ಯಾದಿ ಸೇವೆ ಹಾಗೂ ಗುರುಪರವು, ಗ್ರಾಮಸ್ಥರಿಂದ ಆರತಿಸೇವೆ, ಗಂಗಮ್ಮನ ಕೆರೆಯಲ್ಲಿ ಪೂಜಾಫಲಹಾರ ಸೇವೆಯೊಂದಿಗೆ ಬಂಗಾರದ ಅಡ್ಡಪಲ್ಲಕ್ಕಿ ಉತ್ಸವ ಕಾರ್ಯದೊಂದಿಗೆ ಸೋಮವಾರ ರಾತ್ರಿ ಸ್ವಾಮಿಯ ಅವಭೃತ ಸ್ನಾನ, ನಡೆಮುಡಿ ಉತ್ಸವದೊಂದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ವಜ್ರಸೇವಾ ಮಹೋತ್ಸವ ಕೊನೆಗೊಂಡಿತು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.