26ರಿಂದ ಮಧುಗಿರಿ ದಂಡಿನಮಾರಮ್ಮ ಜಾತ್ರೆ
ಕ.ಪ್ರ. ವಾರ್ತೆ ್ಣ ಮಧುಗಿರಿ ್ಣ ಮಾ.21
ಇತಿಹಾಸ ಪ್ರಸಿದ್ಧ ಮಧುಗಿರಿ ಶ್ರೀ ದಂಡಿನಮಾರಮ್ಮ ಜಾತ್ರೆ ಮಾ.26 ರ ಮಂಗಳವಾರದಿಂದ ಏ.5 ರ ಶುಕ್ರವಾರದವರೆಗೆ ಸರ್ಕಾರದ ವತಿಯಿಂದ ವಿಜೃಂಭಮೆಯಂದ ನಡೆಯಲಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ಆಡಳಿತಾಧಿಕಾರಿ ಸಿ.ಅನಿತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
26ರ ಮಂಗಳವಾರ ಜಾತ್ರೆ ಪ್ರಾರಂಭ, ಪಂಚ ಕಳಸ ಸ್ಥಾಪನೆ-ಹಳ್ಳಿಕಾರರಿಂದ, ಗೌಡರಿಂದ ಬಾನ. 27ರ ಬುಧವಾರ ಸಾರ್ವಜನಿಕವಾಗಿ ಗ್ರಾಮಸ್ಥರಿಂದ ಆರತಿ.
28 ರಂದು ಗುಗ್ಗರಿ ಗಾಡಿಗಳ ಸೇವೆ, 29ಕ್ಕೆ ದೇವಸ್ಥಾನದ ವತಿಯಿಂದ ರಥೋತ್ಸವ, 30ಕ್ಕೆ ಹಳ್ಳಿಕಾರರಿಂದ ಉಯ್ಯಾಲೆ ಉತ್ಸವ, 31ಕ್ಕೆ ಕುಂಚಿಟಿಗ ಒಕ್ಕಲಿಗರಿಂದ ಸಿಂಹವಾಹನ, ಏ.1 ರಂದು ಕುರುಬರಿಂದ ಚಂದ್ರ ಮಂಡಲ ವಾಹನ, 2 ಕ್ಕೆ ಭಜಂತ್ರಿಯವರಿಂದ ನವಿಲು ವಾಹನ, 3ಕ್ಕೆ ಹಳ್ಳಿಕಾರರಿಂದ ಭಂಡಾರ ಉತ್ಸವ ಹಾಗೂ ದೇವಸ್ಥಾನದ ವತಿಯಿಂದ ಆಕರ್ಷಕ ಬೆಳ್ಳಿ ಪಲ್ಲಕ್ಕಿ ಉತ್ಸವ ಮತ್ತು ಸಿಡಿಮದ್ದು ಪ್ರದರ್ಶನ, 4 ರಂದು ದೇವಸ್ಥಾನದ ವತಿಯಿಂದ ಅಗ್ನಿಕುಂಡ, 5 ರಂದು ಚಿನಕವಜ್ರ, ಕೆರೆಗಳಪಾಳ್ಯ, ಕವಾಡಿಗರಪಾಳ್ಯ ಗ್ರಾಮಸ್ಥರಿಂದ ಮಡಿಲಕ್ಕಿ ಸೇವೆ, ನಂತರ ದೇವರು ಗುಡಿದುಂಬಿಸುವುದು. ಹಳ್ಳಿಕಾರರಿಂದ ಜಾತ್ರೆ ಮುಕ್ತಾಯ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.