27 ರಂದು ಕಲ್ಲುಕೋಟೆಯಲ್ಲಿ ರಥೋತ್ಸವ
ತುಮಕೂರು: ಶಿರಾದ ಕಲ್ಲುಕೋಟೆ ಗುಡ್ಡದ ಲಕ್ಷ್ಮೀರಂಗನಾಥಸ್ವಾಮಿ ಕಲ್ಯಾಣೋತ್ಸವ ಹಾಗೂ ರಥೋತ್ಸವ ಮಾ. 26 ರಿಂದ 28 ರವರೆಗೆ ಏರ್ಪಾಟಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಕೆ. ರಂಗನಾಥ್ ತಿಳಿಸಿದ್ದಾರೆ. 26 ರಂದು ಕಲ್ಲುಕೋಟೆ ಯಜಮಾನರು ಹಾಗೂ ಗ್ರಾಮಸ್ಥರಿಂದ ಗಂಗಾಪೂಜೆ, ಆದಲೂರು ಚಿಕ್ಕನಕೋಟೆ, ಹೊಯ್ಸಳ ಕಟ್ಟೆ, ಜೋಗಯ್ಯನ ಪಾಳ್ಯದ :ದಲವಾದಿ ಜನಾಂಗದವರಿಂದ ಜಂಡೆದ ಮರ ಪೂಜೆ, 27 ರಂದು ಕೊಟ್ಟ ಗ್ರಾಮದ ಧರ್ಮದರ್ಶಿ ಹಾಗೂ ಕುಟುಂಬದವರಿಂದ ವಿವಿಧ ಪೂಜೆ, 28 ರಂದು ಓಕಳಿ ಉತ್ಸವ, ಮಂಡೆ ಹರಕೆ ಏರ್ಪಡಿಸಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.