ಜನಪ್ರತಿನಿಧಿಗಳೇ ಅಧಿಕಾರಿಶಾಹಿಗಳ ಕೈಗೊಂಬೆಯಾಗಬೇಡಿ: ದೊರೈರಾಜು
ಕ.ಪ್ರ. ವಾರ್ತೆ ತುಮಕೂರು ಮಾ.25
ಜನಪ್ರತಿನಿಧಿಗಳು ಅಧಿಕಾರಿಶಾಹಿಗಳ ಕೈಗೊಂಬೆಯಾಗಬಾರದು ಎಂದು ಚಿಂತಕ ಕೆ. ದೊರೈರಾಜು ಅಭಿಪ್ರಾಯಪಟ್ಟರು.
ಅವರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ತುಮಕೂರು ನಗರಸಭೆಗೆ ಸ್ಲಂ ನಿವಾಸಿಗಳ ಪರವಾಗಿ ಆಯ್ಕೆಯಾದ ನೂತನ ಸದಸ್ಯರೊಂದಿಗೆ ಸಮಾಲೋಚನೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
6ನೇ ವಾರ್ಡ್‌ನ ಪ್ರೆಸ್ ರಾಜಣ್ಣ, 22ನೇ ವಾರ್ಡ್‌ನ ರವಿಕುಮಾರ್, 34 ನೇ ವಾರ್ಡ್‌ನ ಯಶೋದಮ್ಮ, 35ನೇ ವಾರ್ಡ್‌ನ ಲೋಕೇಶ್, 18ನೇ ವಾರ್ಡ್‌ನ ಮುಜಿದಾ ಖಾನಂ, 14ನೇ ವಾರ್ಡ್‌ನ ಎಂ.ಪಿ. ಮಹೇಶ್, 8ನೇ ವಾರ್ಡ್‌ನ ಸೈಯದ್ ನಯಾಜ್ ಮತ್ತು 13ನೇ ವಾರ್ಡ್‌ನ ಸೈಯದ್ ಹಾಫೀಜ್ ಅವರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.
ಬಡವರ ಬಗ್ಗೆ ಜನಪ್ರತಿನಿಧಿಗಳು ನಂಬಿಕೆ ಇಡುವುದಾದರೆ ನಿಮ್ಮನ್ನು ಸ್ಲಂ ನಿವಾಸಿಗಳು, ನಗರ ವಂಚಿತ ಸಮುದಾಯಗಳು, ಕೂಲಿ ಕಾರ್ಮಿಕರು ಯಾವತ್ತೂ ಕೈ ಬಿಡುವುದಿಲ್ಲ ಎಂದರು.
ನಗರಸಭೆಯಲ್ಲಿ ಸ್ಲಂ ಜನರ ವಿರೋಧಿ ನೀತಿಗಳ ಬಗ್ಗೆ, ಸ್ಲಂ ಜನರ ಪರವಾಗಿ ನಗರಸಭೆಗೆ ಆಯ್ಕೆಯಾಗಿರುವ ಸದಸ್ಯರು ಧ್ವನಿ ಎತ್ತಬೇಕು ಎಂದು ತಿಳಿಸಿದರು. ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಮಾತನಾಡಿ ಕೊಳಗೇರಿ ಮುಕ್ತ ನಗರಕ್ಕೆ ತುಮಕೂರು ನಗರ ಸಭೆಗೆ ಆಯ್ಕೆಯಾಗಿರುವವರು ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಅನುಮೋದನೆ ನೀಡುವಂತೆ ಕೋರಿದರು.
ಈ ಸಂದರ್ಭದಲ್ಲಿ ತುಮಕೂರು ನಗರದಲ್ಲಿರುವ ಕೊಳಗೇರಿ ನಿವಾಸಿಗಳ ಸಮಸ್ಯೆ ಮತ್ತು ಬದುಕು, ಕೊಳಗೇರಿ ಮುಕ್ತ ನಗರದ ಬಗ್ಗೆ ತುಮಕೂರು ನಗರಸಭೆಗೆ ಆಯ್ಕೆಯಾಗಿರುವವರಿಗೆ ಮಾಹಿತಿ ಕೈಪಿಡಿ ನೀಡಿ ಸಮಾಲೋಚಿಸಲಾಯಿತು.
ಸಭೆಯಲ್ಲಿ ಕೊಳಗೇರಿ ಸಮಿತಿ ಪ್ರಧಾನ ಕಾರ್ಯದರ್ಶಿ ಸೈಯದ್ ಅಲ್ತಾಫ್, ಕಾರ್ಯಕಾರಿ ಸಮಿತಿ ಪದಾಧಿಕಾರಿಗಳಾದ ಶೆಟ್ಟಳಯ್ಯ, ರಾಮಯ್ಯ, ಅರುಣ್, ಉದಯ, ಕೋಮಲ್, ಗಾಯತ್ರಿ, ಶೃತಿ, ಕೆಂಪೇಶ್ವರಿ, ಮುರುಗ,ಕಾಶಿ, ರಾಮಕ್ಕ, ರಜಿಯಬಿ ಮುಂತಾದವರು ಭಾಗವಹಿಸಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.