ವಿಜೃಂಭಣೆಯ ರಾಘವೇಂದ್ರ ಸ್ವಾಮಿ ವರ್ಧಂತಿ ಮಹೋತ್ಸವ
ತಿಪಟೂರು: ನಗರದೊ ಕೋಟೆ ಶ್ರೀ ರಾಘವೇಂದ್ರ ಸ್ವಾಮಿಗಳ 418ನೇ ವರ್ಷದ ವರ್ಧಂತಿ ಮಹೋತ್ಸವವು ವಿಜೃಭಣೆಯಿಂದ ನಡೆಯಿತು. ಪ್ರತಿದಿನ ಪಂಚಾಮೃತಾಭಿಷೇಕ, ಅಷ್ಟೋತ್ತರ ಸೇವೆ, ಕನಕಾಭಿಷೇಕ, ರಂಗಪೂಜೆ, ಮಹಾಮಂಗಳಾರತಿ, ಲೋಕ ಕಲ್ಯಾಣಾರ್ಥವಾಗಿ ವಿಷ್ಣುಸಹಸ್ರನಾಮ ಯಾಗ, ಪಾದಪೂಜೆ, ಉತ್ತರಾಭಿಮುಖ ಮುಖ್ಯ ಪ್ರಾಣದೇವರ ರಥೋತ್ಸವ ಹಾಗೂ ಭಕ್ತಿಸುಧಾ ವರ್ಷಿಣಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕುಕ್ಕೆ ಶ್ರೀ ಸುಬ್ರಹ್ಮಣ್ಯಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ಪಾದಂಗಳವರಿಂದ ನರಸಿಂಹ ದೇವರ ಪೂಜೆ, ಗುರುರಾಯರಿಗೆ ಮಹಾಮಂಗಳಾರತಿ, ಫಲ ಮಂತ್ರಾಕ್ಷತೆ ಹಾಗೂ ಪ್ರವಚನ ಕಾರ್ಯಕ್ರಮ ನಡೆಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.