ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಇಬ್ಬರೂ ಬೇಡವೆಂದಾದರೆ

Parashurama
Updated On : 26 Mar 2013, 10:16 am

ಎಂ.ಟಿ.ಕೃಷ್ಣಪ್ಪನವರಿಗೆ ಟಿಕೆಟ್ ತಪ್ಪಿದರೆ ತಾಲೂಕು ಪಂಚಾಯ್ತಿ  ಮಾಜಿ ಅಧ್ಯಕ್ಷ ಬಿ.ಕೆ.ಸೋಮಣ್ಣ ಸಹ ಸ್ಪರ್ಧೆ ಮಾಡಲು ಮುಂದಾಗಲಿದ್ದಾರೆ. ಆದರೆ ಜೆಡಿಎಸ್ ಹೈಕಮಾಂಡ್ ಈರ್ವರಿಗೂ ಬೇಡ ಎಂದು ನಿರ್ಧರಿಸಿದರೆ, ಮಾಯಸಂದ್ರ ಜಿಲ್ಲಾ ಪಂಚಾಯ್ತಿ ಸದಸ್ಯ ಶ್ರೀನಿವಾಸಯ್ಯನವರ ಬಗ್ಗೆ ಉತ್ತಮ ಭಾವನೆ ಇದೆ. ಸರಳ, ಮೃದುತ್ವ, ಸದ್ಯ ಮಾಯಸಂದ್ರ ಹೋಬಳಿಯಲ್ಲಿ ಸಾಕಷ್ಟು ಅಭಿವೃಧ್ಧಿ ಕೆಲಸಗಳನ್ನೂ ಸಹ ಮಾಡಿದ್ದಾರೆ. ಕ್ಷೇತ್ರದ ಸಿಎಸ್ ಪುರ ಹೋಬಳಿಯಲ್ಲಿಯೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇವರು ಸೋಮಣ್ಣ ಹಾಗೂ ಎಂ.ಟಿ.ಕೃಷ್ಣಪ್ಪನವರ ಒಡನಾಡಿಯೂ ಹೌದು. ಈರ್ವರ ನಡುವಿನ ಗೊಂದಲ ನಿವಾರಣೆಗೆ ಸೂಕ್ತ ವ್ಯಕ್ತಿ ಎಂಬ ಭಾವನೆಯೂ ಜೆಡಿಎಸ್ ವಲಯದಲ್ಲಿ ಹರಿದಾಡುತ್ತಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸಬಲ್ಲರು ಎಂಬ ಭಾವನೆ ಇದೆ. ಇವರನ್ನು ಬಿಟ್ಟರೆ ಜಿಲ್ಲಾ ಪಂಚಾಯ್ತಿ ಆರೋಗ್ಯ ಹಾಗೂ ಶಿಕ್ಷಣ ಸಮಿತಿ ಅಧ್ಯಕ್ಷ ದಬ್ಬೇಘಟ್ಟ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ಎ.ಬಿ.ಜಗದೀಶ್, ಎಪಿಎಂಸಿಯ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ತಾಲೂಕು ಪಂಚಾಯ್ತಿ ಅಧ್ಯಕ್ಷ ಎಂ.ಡಿ.ರಮೇಶ್ ಗೌಡ, ಮಾಜಿ ಎಪಿಎಂಸಿ ಅಧ್ಯಕ್ಷ ದಂಡಿನಶಿವರ ಶಂಕರೇಗೌಡ ಮೊದಲಾದವರು ಸ್ಪರ್ಧಾಕಾಂಕ್ಷಿಗಳಾಗಿದ್ದಾರೆ. ಇವರೆಲ್ಲರದು ಶಾಸಕ ಎಂ.ಟಿ.ಕೃಷ್ಣಪ್ಪನವರಿಗೇ ಟಿಕೆಟ್ ಕೊಡಲೇಬೇಕು ಎಂಬ ಒತ್ತಾಯ. ಆದರೆ ಟಿಕೆಟ್ ಕೈ ತಪ್ಪಿದಲ್ಲಿ ಟಿಕೆಟ್ ತಮಗಿರಲಿ ಎಂಬುದು ಇವರ ಇಚ್ಛೆ. ಟಿಕೆಟ್ ತಪ್ಪಿದರೆ ಶಾಸಕ ಕೃಷ್ಣಪ್ಪನವರು ಕೈ ಕಟ್ಟಿ
ಕುಳಿತುಕೊಳ್ಳುವವರಂತೂ ಅಲ್ಲ. ತಾವು ತಾಲೂಕಿಗೆ ಹಾಗೂ ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನೇ ಮುಂದಿಟ್ಟುಕೊಂಡು ಹಾಗೂ ಈಗಾಗಲೇ ಸಾಕಷ್ಟು ಪಕ್ಷದ ಸಂಘಟನೆ ಮಾಡಿರುವ ಅವರು ಸ್ಪತಂತ್ರವಾಗಿ ಸ್ಪರ್ಧೆಗೆ ಇಳಿದರೂ ಅಚ್ಚರಿಯಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments