'ಸೊಗಡು ವಿಕೃತ ಮನಸ್ಸಿನ ಶಾಸಕ'
ಕ.ಪ್ರ. ವಾರ್ತೆ ತುಮಕೂರು ಮಾ.26
ತುಮಕೂರು ನಗರ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ವಿಕೃತ ಮನಸ್ಸಿನ ಶಾಸಕ ಎಂದು ಕೆಜೆಪಿ ತುಮಕೂರು ನಗರ ಅಭ್ಯರ್ಥಿ ಜ್ಯೋತಿ ಗಣೇಶ್ ಲೇವಡಿ ಮಾಡಿದರು.
ಅವರು ತುಮಕೂರಿನಲ್ಲಿ ಏರ್ಪಾಟಾಗಿದ್ದ ಕೆಜೆಪಿ ಸಮಾವೇಶದಲ್ಲಿ ಮಾತನಾಡಿದರು. ಸೊಗಡು ಶಿವಣ್ಣನವರಿಗೆ ಹೆಬ್ಬೆಟ್ಟಿನ ಗಿರಾಕಿಗಳೇ ಬೇಕು ಎಂದು ವ್ಯಂಗ್ಯವಾಡಿದರು. ತುಮಕೂರಿನಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗಿದ್ದು ಉಪ್ಪಾರಹಳ್ಳಿ ಶೆಟ್ಟಿಹಳ್ಳಿ ಮೇಲ್ಸೇತುವೆಯನ್ನು ಬೇಕಾಬಿಟ್ಟಿಯಾಗಿ ನಿರ್ಮಾಣ ಮಾಡಲಾಗಿದೆ ಎಂದರು.
ತುಮಕೂರು ನಗರದ ಸ್ವಾಭಿಮಾನಕ್ಕೆ ಸೊಗಡು ಶಿವಣ್ಣ ಧಕ್ಕೆ ತಂದಿದ್ದಾರೆ. ಇಂತಹ ದುರಂಹಕಾರಿ ಶಾಸಕರನ್ನು ಹೊರ ಹಾಕುವಂತೆ ಜ್ಯೋತಿ ಗಣೇಶ್ ಕಾರ್ಯಕರ್ತರಿಗೆ ಮನವಿ ಮಾಡಿದರು.
ಕೇವಲ 3 ತಿಂಗಳಿನಲ್ಲಿ ಕೆಜೆಪಿ ಸ್ಥಾಪನೆಯಾಗಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಗಮನಾರ್ಹ ಸಾಧನೆ ಮಾಡಿದೆ. ತುಮಕೂರು ನಗರದಲ್ಲಿ ಬಿಜೆಪಿ ಗಿಂತಲೂ ಹೆಚ್ಚಿನ ನಗರಸಭೆ ಸ್ಥಾನಗಳನ್ನು ಪಡೆಯುವ ಮೂಲಕ ಪಕ್ಷ ಏನು ಎಂಬುದನ್ನು ಸಾಬೀತು ಮಾಡಿದೆ ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.