ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದುರ್ಗಮ್ಮನ ಕಳಸ ಇಂದು

Rashmi Kasaragodu
Updated On : 2 May 2013, 12:14 pm

ಹುಳಿಯಾರು: ಗ್ರಾಮದೇವತೆ ದುರ್ಗಾಪರಮೇಶ್ವರಿ ಅಮ್ಮನವರ ಕಳಸ ಸ್ಥಾಪನೆ ಕಾರ್ಯಕ್ರಮ ಹುಳಿಯಾರಮ್ಮ, ಕೆಂಚಮ್ಮ, ಗೌಡಗೆರೆ ದುರ್ಗಮ್ಮ, ತಿರುಮಲಾಪುರದ ಕೊಲ್ಲಾಪುರದಮ್ಮ, ದಮ್ಮಡಿಹಟ್ಟಿಯ ಈರಬೊಮ್ಮಕ್ಕದೇವಿ, ಕೆ.ಸಿ.ಪಾಳ್ಯದ ಅಂತರಘಟ್ಟಮ್ಮ ದೇವಿ, ಹೊಸಹಳ್ಳಿಯ ಅಂತರಘಟ್ಟಮ್ಮ ದೇವಿಯವರ ಸಮ್ಮುಖದಲ್ಲಿ ಗುರುವಾರ ಬೆಳಗಿನ ಜಾವ ಹಮ್ಮಿಕೊಳ್ಳಲಾಗಿದೆ.
 ರಾತ್ರಿ 8 ಘಂಟೆಗೆ ದೇವಾಲಯದ ಆವರಣದಲ್ಲಿ ಉಯ್ಯಾಲೋತ್ಸವ, 9 ಗಂಟೆಗೆ ಗಾನವಿಶಾರದ ಆರ್ಕೆಸ್ಟ್ರದವರಿಂದ ರಸಮಂಜರಿ ಕಾರ್ಯಕ್ರಮ ಇದೆ.
ಅಂಚೆ ಕಾರ್ಡ್ನಲ್ಲಿ ಕಥಾ ಸ್ಪರ್ಧೆ
ತುಮಕೂರು: ತುಮಕೂರು ನಗರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಂಚೆ ಕಾರ್ಡ್ನಲ್ಲಿ ಕಥಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಥಾ ಸ್ಪರ್ಧೆಯಲ್ಲಿ 30 ಮಂದಿ ಬರಹಗಾರರು ಪಾಲ್ಗೊಂಡಿದ್ದರು. ಮುಖ್ಯ ಅತಿಥಿಯಾಗಿ ಎಚ್.ಆರ್. ನವೀನ್ ಪಾಲ್ಗೊಂಡಿದ್ದರು. ಪ್ರಥಮ ಬಹುಮಾನ ತುಮಕೂರು ಭಾರ್ಗವಿ, ದ್ವಿತೀಯ ರಾಮಕೃಷ್ಣಭಟ್, ತೃತೀಯ ಎಂ.ಜಿ.  ಸಿದ್ದರಾಮಯ್ಯ ಪಡೆದರು. ಸಮಾಧಾನಕರ ಬಹುಮಾನವನ್ನು ಎಚ್.ಎಸ್. ಸಿದ್ದಪ್ಪ ಹಾಗೂ ಶಾಂತಲಕ್ಷ್ಮಿ ಪಡೆದರು. ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಕೆಂ.ಬ ರೇಣುಕಯ್ಯ ವಹಿಸಿದ್ದರು.
ಕಾವೇರಿ ಕಲ್ಪತರು ಬ್ಯಾಂಕ್ ಶಾಖೆ: ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ನ 338 ಶಾಖೆಯನ್ನು ತುಮಕೂರು ನಗರದ ಚಿಕ್ಕಪೇಟೆಯಲ್ಲಿ ಕಳೆದ ತಿಂಗಳ 29 ರಂದು ಪ್ರಾರಂಭಿಸಲಾಗಿದೆ ಎಂದು ಬ್ಯಾಂಕ್ನ ಪ್ರಾದೇಶಿಕ ವ್ಯವಸ್ಥಾಪಕರು ತಿಳಿಸಿದ್ದಾರೆ. ಆಧುನಿಕ ಕೋರ್ ಬ್ಯಾಂಕಿಂಗ್ ಮತ್ತು ಎನ್ಇಎಫ್ಟಿ ಸೌಲಭ್ಯಗಳನ್ನು ಹೊಂದಿದ್ದು, ಕಂಪ್ಯೂಟರೀಕರಣ ಗೊಳಿಸಲಾಗಿದೆ. ಪ್ರಾದೇಶಿಕ ವ್ಯವಸ್ಥಾಪಕ ಕೆ.ಟಿ.  ಮಂಜುನಾಥಯ್ಯ ಹಾಗೂ ಹಿರಿಯ ವ್ಯವಸ್ಥಾಪಕರು ಶಾಖೆಯನ್ನು ಉದ್ಘಾಟಿಸಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement