ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದೇಶದ ಕಾರ್ಮಿಕ ವರ್ಗ ಶೋಷಣೆಗೆ ಒಳಗಾಗಿದೆ: ಎನ್. ಶಿವಣ್ಣ

Rashmi Kasaragodu
Updated On : 2 May 2013, 12:14 pm

ಕ.ಪ್ರ.ವಾರ್ತೆ   ತುಮಕೂರು   ಮೇ 1
ದೇಶದಲ್ಲಿ ಕಾರ್ಮಿಕ ವರ್ಗದವರು ಶೋಷಣೆಗೆ ಒಳಗಾಗಿದ್ದಾರೆ. ಸರ್ಕಾರ ಕಾರ್ಮಿಕರಿಗೆ ಸಹಾಯ ಮಾಡಲು ಮುಂದಾಗುತ್ತಿಲ್ಲ.  ದುಡಿದು ತಿನ್ನುತ್ತಿರುವ ಕಾರ್ಮಿಕರಿಗೆ ಬದುಕಲು ಕಷ್ಟವಾಗುತ್ತಿದೆ ಎಂದು ಕಾಂ. ಎನ್. ಶಿವಣ್ಣ ಹೇಳಿದರು.
ನಗರದ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಎಐಟಿಯುಸಿ ವತಿಯಿಂದ ಮೇ ದಿನಾಚಾರಣೆಯ ಅಂಗವಾಗಿ ಮಾತನಾಡಿದ ಅವರು, ಇಂದಿನ ದಿನ ಮಾನದಲ್ಲಿ ಕಾರ್ಮಿಕರು ಬದುಕುವುದು ಕಷ್ಟವಾಗುತ್ತಿದೆ. ಕೆಲಸಕ್ಕೆ ಅನುಗುಣವಾಗಿ ಸಂಬಳ ದೊರೆಯುತ್ತಿಲ್ಲ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ. ಕೂಲಿ ಕಾರ್ಮಿಕರಾಗಿರಬಹುದು, ರೈತಾಪಿ ವರ್ಗದವರಾಗಿರಬಹುದು  ಇವರಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದರು.
ಕಾರ್ಮಿಕರನ್ನು ದಿನದಲ್ಲಿ 12 ಗಂಟೆ ಕೆಲಸ ಮಾಡಿಸಿಕೊಂಡು 8 ಗಂಟೆಗಳ ವೇತನವನ್ನು ಮಾಲಿಕರು ಕೊಡುತ್ತಿದ್ದಾರೆ.  ಪ್ರತಿಯೊಂದು ಅಂತದರಲ್ಲಿಯೂ ಅವರದೆ ಆದ ಸಮಸ್ಯೆಗಳಿವೆ. ದೇಶದಲ್ಲಿ 40 ಕೋಟಿಗಳಷ್ಟು ಅಸಂಘಟಿತ ಕಾರ್ಮಿಕರು ಇದ್ದಾರೆ ಎಂದರು.
ಇತ್ತೀಚಿನ ರಾಜಕೀಯ ಪಕ್ಷಗಳು ಜನ ಪ್ರತಿನಿಧಿಗಳನ್ನು ಕಿತ್ತು ತಿನ್ನುವ ಕೆಲಸ ಮಾಡುತ್ತಿದ್ದಾರೆ. ಕೇವಲ ಹಣದ ರಾಜಕೀಯವಾಗಿ ಬಂಡವಾಳದ ಹಾದಿಯ ಜಾಡಿನಲ್ಲಿ ನಡೆಯುತ್ತಿದ್ದಾರೆ. ಇಂತವರು ಕಾರ್ಮಿಕರ ಕಷ್ಟ-ಸುಖಗಳಿಗೆ ಭಾಗಿಯಾಗಲಾರರು. ಆದ್ದರಿಂದ ಇಂತಹವುಗಳ ವಿರುದ್ಧ ಎಐಟಿಯುಸಿಯ ಮೂಲಕ ಹೋರಾಟ ಮಾಡಿ ಕಾರ್ಮಿಕರಿಗೆ ಸಿಗುವಂತಹ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು. ಟಿ. ಆರ್. ರೇವಣ್ಣ ಮಾತನಾಡಿ ದಿನ ನಿತ್ಯ ಬೇಡಿಕೆಗಳು ಹೆಚ್ಚಾಗುತ್ತಿರುವುದರಿಂದ ಜನರು ಬದುಕು ನಡೆಸಲು ತುಂಬಾನೆ ಕಷ್ಟಕರವಾಗಿಬಿಟ್ಟಿದೆ. ದುಡಿವ ಹಣದಿಂದ ಜೀವನ ನಡೆಸಲಾಗುತ್ತಿಲ್ಲ, ಶೇ. 60 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಸಾವನ್ನಪ್ಪುತ್ತಿದ್ದಾರೆ. ಇದರ ಬಗ್ಗೆ ಸರ್ಕಾರ ಯಾವ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ, ರಾಜಕೀಯ ವ್ಯವಸ್ಥೆಯಲ್ಲಿ ನೋಡಿದಾಗ ಯಾವ ಪಕ್ಷಕ್ಕೆ ಯಾವ ಅಭ್ಯರ್ಥಿಗೆ ಮತಗಳನ್ನು ಹಾಕಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎಂದರು. ಒಟ್ಟಿನಲ್ಲಿ ಗೊಂದಲಮಯ ರಾಜಕೀಯ ಸೃಷ್ಟಿಯಾಗಿದೆ ಎಂದರು.
 ಎಐಟಿಯುಸಿ ಗೌರವಾಧ್ಯಕ್ಷ, ಎನ್. ಶಿವಣ್ಣ, ರಾಘವೆಂದ್ರ, ಲೋಕೇಶ್, ಡಿ.ಎನ್. ಲಕ್ಷ್ಮಣ,  ಥಾಮಸ್, ವಾಸುದೇವ್ ಕುಮಾರ್, ಶಶಿಕಾಂತ್, ಕಲಾವತಿ, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ವಿ. ಚಿನ್ನಪ್ಪ, ಪ್ರಧಾನ ಕಾರ್ಯದರ್ಶಿ ಗಿರೀಶ್, ಉಪಾಧ್ಯಕ್ಷ ಕಂಬೇಗೌಡ, ಚಂದ್ರಶೇಖರ್, ಕುಮಾರ್ಸಿಂಗ್ ಮುಂತಾದವರು ಭಾಗವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement