ದೇಶದ ಸಮಗ್ರ ಅಭಿವೃದ್ಧಿಗೆ ಕಾರ್ಮಿಕ ವರ್ಗದ ಪಾಲು ಹೆಚ್ಚು
ಕುಣಿಗಲ್: ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಶ್ರಮಿಕ ವರ್ಗವಾದ ಕಾರ್ಮಿಕ ವರ್ಗದವರ ಪಾಲು ಹೆಚ್ಚಿದ್ದು ರಾಜ್ಯ, ರಾಷ್ಟ್ರವನ್ನಾಳುವವವರು ಕಾರ್ಮಿಕ ವರ್ಗದ ಹಿತಕಡೆಗಣಿಸುತ್ತಿರುವುದು ನಿಜಕ್ಕೂ ಖೇದಕರ ಎಂದು ಸಿಐಟಿಯು ತಾಲೂಕು ಪ್ರದಾನ ಕಾರ್ಯದರ್ಶಿ ಅಬ್ದುಲ್ ಮುನಾಫ್ ತಿಳಿಸಿದರು.
ಬುಧವಾರ, ಕಾರ್ಮಿಕ ದಿನಾಚರಣೆ ಅಂಗವಾಗಿ ಸಿಐಟಿಯು ತಾಲೂಕು ಘಟಕ, ಕುದುರೆಫಾರಂ ಕಾರ್ಮಿಕರ ಸಂಘದ ಸಂಯುಕ್ತಾಶ್ರಯದಲ್ಲಿ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಸಮೀಪ ಲಾಲ್ಜಂಡಾ (ಕೆಂಪು ಬಾವುಟ) ಆರೋಹಣ ನೆರವೇರಿಸಿ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಕಾರಣ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಮೇ ದಿನದಂದು ಮಾತ್ರ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚಿಸುವ ವಾತಾವರಣ ನಿರ್ಮಾಣವಾಗುತ್ತಿರುವುದಕ್ಕೆ ಖಂಡನೆ ವ್ಯಕ್ತಪಡಿಸಿದರು. ಎಲ್ಲಿಯವರೆಗೂ ಕಾರ್ಮಿಕರು ಶೋಷಣೆ ಮುಕ್ತ ವಾತಾವರಣದಲ್ಲಿ ಕೆಲಸ ಮಾಡುವ ವಾತವರಣ ನಿರ್ಮಾಣವಾಗುವುದಿಲ್ಲವೋ ಅಲ್ಲಿಯವರೆಗೂ ಈ ರಾಜ್ಯ, ರಾಷ್ಚ್ರಕ್ಕೆ ಭವಿಷ್ಯವಿಲ್ಲ ಎಂದರು.