ಅಕ್ಕಮಹಾದೇವಿ ಸಮಾಜ 57ನೇ ವಾರ್ಷಿಕೋತ್ಸವ
ತಿಪಟೂರು: ನಗರದ ಪಿ.ಜಿ.ಎಂ. ಕಲ್ಯಾಣ ಮಂಟಪದಲ್ಲಿ ಅಕ್ಕಮಹಾದೇವಿ ಸಮಾಜದ 57ನೇ ವಾರ್ಷಿಕೋತ್ಸವ ಹಾಗೂ ಅಕ್ಕಮಹಾದೇವಿ ಜಯಂತಿಯನ್ನು ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಎಸ್.ವಿ.ಪಿ ಕಾಲೇಜಿನ ಉಪನ್ಯಾಸಕ ಕೆ.ಎನ್. ರೇಣುಕಯ್ಯ ಮತ್ತಿತರರಿದ್ದರು. ಈ ಸಂದರ್ಭದಲ್ಲಿ ಅಮೃತ ನೇತ್ರ ಟ್ರಸ್ಟ್ ವತಿಯಿಂದ ಬೆಂಗಳೂರಿನ ಚಂದ್ರುರವರನ್ನು ಸನ್ಮಾನಿಸಲಾಯಿತು. ಮುಕ್ತಾ ತಿಪ್ಪೇಶ್ ವಾರ್ಷಿಕ ವರದಿ ವಾಚಿಸಿದರು. ಹೇಮ ಬಸವರಾಜು ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಸಿದ್ದಗಂಗಮ್ಮ ಸ್ವಾಗತಿಸಿ, ಶೋಭ ಮಂಜುನಾಥ್ ನಿರೂಪಿಸಿ, ವೇದ ಸುರೇಶ್ ವಂದಿಸಿದರು.