ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಭಿವೃದ್ಧಿಯಲ್ಲಿ ಬಿಜೆಪಿ 4 ಪಟ್ಟು ಮುಂದು

Rashmi Kasaragodu
Updated On : 3 May 2013, 12:25 pm

ಕ.ಪ್ರ. ವಾರ್ತೆ  ಪಾವಗಡ  ಮೇ 2
ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದ ಮಾಜಿ ಸಿಎಂ ಸದಾನಂದಾಗೌಡ ರಾಜ್ಯದ ಅಭಿವೃದ್ಧಿಯಲ್ಲಿ ಎಲ್ಲ ಪಕ್ಷಗಳಿಗಿಂತ 4ಪಟ್ಟು ಬಿಜೆಪಿ ಮುಂದಿದೆ ಎಂದರು.
ಅವರು ಪಟ್ಟಣಕ್ಕೆ ಆಗಮಿಸಿ ಅಭ್ಯರ್ಥಿ ವಿಜಯ್‌ರಾಜ್ ಪರ ರೋಡ್ ಶೋ ನಡೆಸಿದ ನಂತರ ಎಸ್‌ಎಸ್‌ಕೆ ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ  ಭಾಷಣ ಮಾಡಿದರು. ಕಳೆದ 40 ವರ್ಷಗಳಿಂದ ಮತ ಪಡೆದು ಆಡಳಿತ ನಡೆಸಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಸ್ವಾರ್ಥ ರಾಜಕಾರಣದಲ್ಲಿ ನಿರತರಾಗಿ ಅಭಿವೃದ್ಧಿ ಕಡೆಗಣಿಸಿವೆ. 5 ವರ್ಷದ ಬಿಜೆಪಿ ಆಡಳಿತದಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಕಾಂಗ್ರೆಸ್ ಜೆಡಿಎಸ್‌ಗಿಂತ ರಾಜ್ಯದ ಅಭಿವೃದ್ಧಿಯಲ್ಲಿ ಬಿಜೆಪಿ 4ಪಟ್ಟು ಮುಂದಿದೆ ಎಂದರು. ರಾಜ್ಯದ ಅಭಿವೃದ್ಧಿ ಸಹಿಸದ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ಭ್ರಷ್ಟಾಚಾರ ನಡೆಸಿದೆ ಎಂದು ಹೇಳುತ್ತಿರುವುದು ದುರುದ್ದೇಶದಿಂದ ಕೂಡಿದೆ. ಕೇಂದ್ರ ಸರ್ಕಾರದಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ ಮೊದಲು ಸರಿಪಡಿಸಲಿ ಎಂದು ಕಿಡಿಕಾರಿದರು. ಕಳೆದ 40 ವರ್ಷಗಳಿಂದ ವಿರೋಧ ಪಕ್ಷದಲ್ಲಿ ಕೆಲಸ ಮಾಡಿದ ನಾವು ಜನರ ಸಮಸ್ಯೆ ಹಾಗೂ ನಾಡಿ ಮಿಡಿತ ಅರಿತಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಶೇ.90ರಷ್ಟು ಭರವಸೆಗಳನ್ನು ಈಡೇರಿಸುವ ಮೂಲಕ ಜನತೆಯ ವಿಶ್ವಾಸಕ್ಕೆ ಅರ್ಹರಾಗಿದ್ದೇವೆ. ರಾಜ್ಯದ ಜನತೆಯ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸಂಪನ್ಮೂಲ ಕ್ರೋಢೀಕರಿಸುವ ಮೂಲಕ ಸಾಮಾಜಿಕ ಸಮಸ್ಯೆ ನಿವಾರಣೆಗೆ ಸರ್ಕಾರ ಬದ್ಧವಾಗಿದೆ ಎಂದರು.
ರೈತರ ಸಾಲ ಮನ್ನ,   ಗ್ರಾಮೀಣ ರಸ್ತೆಗಳ ಡಾಂಬರೀಕರಣ, ಕುಡಿಯುವ ನೀರು, ಎಸ್‌ಸಿ, ಎಸ್‌ಟಿ ಕಲ್ಯಾಣ ಹಾಗೂ ಎಲ್ಲಾ ವರ್ಗಗಳಿಗೆ ಸಹಾಯ ಧನ ಸೇರಿದಂತೆ ಅನೇಕ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
 ತಾಲೂಕು ಅಭಿವೃದ್ಧಿ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ವಿಜಯ್‌ರಾಜ್ ರಂತಹ ವಿದ್ಯಾವಂತ ಉತ್ಸಾಹಿ ಯುವಕರನ್ನು ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು. ಅಭ್ಯರ್ಥಿ ವಿಜಯ್‌ರಾಜ್ ಮಾತನಾಡಿ ಚುನಾವಣೆಯಲ್ಲಿ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು. ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕ ನಟ ಜಗ್ಗೇಶ್, ಜಿಲ್ಲಾಧ್ಯಕ್ಷ ಎಸ್.ಶಿವಪ್ರಸಾದ್ ಮಾತನಾಡಿ ಜನವಿರೋಧಿ ಕಾಂಗ್ರೆಸ್ ಜೆಡಿಎಸ್ ತಿರಸ್ಕರಿಸಿ, ಪಕ್ಷದ ಅಭ್ಯರ್ಥಿ ವಿಜಯ್‌ರಾಜ್ ಅವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತನ್ನಿ ಎಂದು ಕರೆ ನೀಡಿದರು.  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ.ಗಿರೀಶ್, ಕಾರ್ಯದರ್ಶಿ ರವಿ, ಮುಖಂಡರಾದ ಸಿ.ಎನ್ ಆನಂದ್‌ರಾವ್ ಡಾ, ಚಕ್ಕರರೆಡ್ಡಿ, ಎಂ.ನಾಗೇಂದ್ರಪ್ಪ, ಶಿವಕುಮಾರ್ ಸಾಕೇಲ್, ಗಾಯಿತ್ರಿ ಮಂಜುನಾಥ್, ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ, ಎಸ್‌ಸಿ ಘಟಕದ ಅಧ್ಯಕ್ಷ ಕಡಪಲಕೆರೆ ಹನುಮಂತರಾಯಪ್ಪ, ಯುವ ಮುಖಂಡ ಸಿ.ಎ.ಅಜೇಯ್ ನಾಗೇಶ್, ಬೆಳ್ಳಿಬಟ್ಟಲು ಪ್ರಭಾಕರ್ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement