ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಎಚ್ಡಿಕೆ ಆದೇಶದಂತೆ ಚುನಾವಣೆ ಪ್ರಚಾರ

Rashmi Kasaragodu
Updated On : 3 May 2013, 12:26 pm

ಪಾವಗಡ: ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆದೇಶದಂತೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದು ನನ್ನ ಜವಾಬ್ದಾರಿ ಎಂದ ಮುಖಂಡ ಡಾ.ವೆಂಕಟರಾಮಯ್ಯ ಅವರು  ನಾಳೆಯಿಂದ ಜೆಡಿಎಸ್ ಪರ ಚುನಾವಣೆ ಪ್ರಚಾರ ಕೈಗೊಳ್ಳುವುದಾಗಿ ತಿಳಿಸಿದರು. ಎಚ್‌ಡಿ.ಕುಮಾರಸ್ವಾಮಿ ಆಶೀರ್ವಾದದಿಂದ ಕಳೆದ 2001ರಿಂದ ಪಕ್ಷ ಸಂಘಟಿಸಿ ಬೆಳೆಸಿದ ನಾನು 2005ರಲ್ಲಿ ಪಕ್ಷದ ಅಭ್ಯರ್ಥಿ ಕೆ.ಎಂ. ತಿಮ್ಮರಾಯಪ್ಪ ಅವರ ಗೆಲವಿಗೆ ಶ್ರಮಿಸಿದ್ದೆ. ಪಕ್ಷದ ರಾಜ್ಯ ಉಪಾಧ್ಯಕ್ಷನಾಗಿ, ಖಜಾಂಚಿಯಾಗಿ ಕೆಲಸ ಮಾಡಿದ್ದು  ಸ್ಥಳೀಯರಿಂದ ಗೊಂದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಪಕ್ಷದಿಂದ ಕೆಲ ಕಾಲ ತಟಸ್ಥನಾಗಿ ಉಳಿದೆ. ಈಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆದೇಶದಂತೆ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಪಕ್ಷದ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ ಅವರಿಗೆ ಬೆಂಬಲಿಸಲಾಗುವುದೆಂದರು. ಬುಧವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಪ್ರಚಾರ ಸಭೆಗೆ ಎಚ್‌ಡಿಕೆ ಆದೇಶದ ಹಿನ್ನೆಲೆಯಲ್ಲಿ ಸಭೆಗೆ ಆಗಮಿಸಿದ್ದು ಅವರ ಆದೇಶ ಪಾಲಿಸುವುದು ನನ್ನ ಕರ್ತವ್ಯವೆಂದರು.  ನನ್ನ ಬಗ್ಗೆ ಸ್ಥಳೀಯರಿಗೆ ಅಸಮಾಧಾನವಿದ್ದರೆ ಅವರು ಎಚ್‌ಡಿಕೆ ಅವರನ್ನು ಭೇಟಿ ಮಾಡಿ ಮಾತನಾಡಿಲಿ ಎಂದರು. ಪಕ್ಷ ಒಡೆಯುವ ತಂತ್ರಗಾರಿಕೆಯಲ್ಲಿ ನಿರತರಾದ ಕೆಲವರು ಕಾಂಗ್ರೆಸ್‌ಗೆ ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಪುರಸಭೆಯ ಚುನಾವಣೆಯಲ್ಲಿ ಪಕ್ಷದ 5 ಸೀಟುಗಳನ್ನು ಗೆಲ್ಲಿಸಿದ್ದು, ನನ್ನ ಬಗ್ಗೆ ಮಾತನಾಡುವ ನೈತಿಕ ಹಕ್ಕು ಯಾರಿಗೂ ಇಲ್ಲವೆಂದರು.    

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement