ಕಾಂಗ್ರೆಸ್‌ಗೆ ಮತ ನೀಡುವಂತೆ ಕೆ.ಬಿ.ಸಿದ್ದಯ್ಯ ಮನವಿ
ತುಮಕೂರು: ಜನರ ತೆರಿಗೆ ಹಣವನ್ನು ಮಠಗಳಿಗೆ ಹಂಚಿ ಮನು ಮತ್ತು ಮತೀಯ ಸಂಸ್ಕೃತಿಯನ್ನು ಬೆಳೆಸಿದ ಬಿಜೆಪಿ ಮತ್ತು ಒಂದು ಜಾತಿಯ ಪಕ್ಷವಾಗಿರುವ ಜೆಡಿಎಸ್‌ಅನ್ನು ತಿರಸ್ಕರಿಸಿ ಜಾತ್ಯತೀತ ಪಕ್ಷವಾದ ಕಾಂಗ್ರೆಸ್‌ಗೆ ಮತ ನೀಡುವಂತೆ ಸಾಹಿತಿ ಹಾಗೂ ದಲಿತ ಸಾಂಸ್ಕೃತಿಕ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಕೆ.ಬಿ. ಸಿದ್ದಯ್ಯ ಕರೆ ನೀಡಿದ್ದಾರೆ.
ಸುದ್ದಿಗ್ಠೋಯಲ್ಲಿಂದು ಮಾತನಾಡಿದ ಅವರು ಎರಡು ವರ್ಷಗಳ ಸಮ್ಮಿಶ್ರ ಸರಕಾರ ಮತ್ತು ಐದು ವರ್ಷಗಳ ಕಾಲ ಒಂದೇ ಪಕ್ಷದ ಆಡಳಿತ ನೋಡಿದ್ದೇವೆ. ಎರಡು ಸರಕಾರಗಳು ಮಠಗಳಿಗೆ ಹಣ ಹಂಚುವ ಮೂಲಕ ಜಾತಿ ಸಂಘಟನೆಯಲ್ಲಿ ತೊಡಗಿ ಪ್ರಜಾಪ್ರಭುತ್ವದ ಮೌಲ್ಯ ಹಾಳು ಮಾಡಿದವು. ರಾಜ್ಯದ ದೃಷ್ಟಿಯಲ್ಲಿ ಕಾಂಗ್ರೆಸ್‌ಗೆ ಮತ ನೀಡಬೇಕೆಂದರು.
ಕಳೆದ ಐದು ವರ್ಷಗಳಲ್ಲಿ ಕರ್ನಾಟಕ ದೇಶದಲ್ಲಿ ಅತಿ ಹೆಚ್ಚು ಪ್ರಚಾರದಲ್ಲಿತ್ತು. ಇದಕ್ಕೆ ಕಾರಣ ಆಡಳಿತ ಪಕ್ಷನಡೆಸಿದ ಭ್ರಷ್ಟಾಚಾರ. ಗಣಿಸಂಪತ್ತನ್ನು ಲೂಟಿ ಮಾಡಿದ ವ್ಯಕ್ತಿಯನ್ನೇ ಮಂತ್ರಿಯನ್ನಾಗಿ, ಅಪರೇಷನ್ ಕಮಲಕ್ಕೆ ಬಲಿಯಾಗಿ ಜನಾಭಿಪ್ರಾಯ ತಿರಸ್ಕರಿಸಿ ಮತ್ತೊಮ್ಮೆ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ಮತದಾರರಿಗೆ ಅಪಮಾನ ಮಾಡಿದರು. ಇಂತಹ ಪಕ್ಷಕ್ಕೆ ಮತ್ತೊಮ್ಮೆ ಜನರು ಮತ ನೀಡುವುದರಲ್ಲಿ ಅರ್ಥವಿದೆಯೇ ಎಂದು ಪ್ರಶ್ನಿಸಿದರು.