ಜ್ಯೋತಿ ನೇತ್ರಾಲಯ ಉದ್ಘಾಟನೆ
ತಿಪಟೂರು: ನಗರದ ರೇಲ್ವೆ ಸ್ಟೇಷನ್ ರಸ್ತೆಯಲ್ಲಿ ನೂತನ ಜ್ಯೋತಿ ನೇತ್ರಾಲಯ ಪ್ರಾರಂಭಿಸಲಾಯಿತು. ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಗುರುಪರದೇಶಿಕೇಂದ್ರ ಸ್ವಾಮೀಜಿಯವರು ಉದ್ಘಾಟಿಸಿದರು.
ಡಾ.ರಾಕೇಶ್ ಮಾತನಾಡಿ, ಕಲ್ಪತರು ನಾಡಾದ ತಿಪಟೂರಿನಲ್ಲಿ ಪ್ರಥಮವಾಗಿ ಜ್ಯೋತಿ ನೇತ್ರಾಲಯವನ್ನು ತೆರೆಯಲಾಗಿದ್ದು, ಇಲ್ಲಿ ವಿವಿಧ ಆಧುನಿಕ ನೇತ್ರ ಚಿಕಿತ್ಸಾ ಸೌಲಭ್ಯಗಳನ್ನು ಒಳಗೊಂಡಿದೆ. ಕಂಪ್ಯೂಟರ್ನಿಂದ ಕಣ್ಣಿನ ಪರೀಕ್ಷೆ, ರೆಟಿನಾ ಕಾಯಿಲೆಗಳ ತಪಾಸಣೆ, ಕಣ್ಣಿನ ಪೊರೆ, ಕೃತಕ ಮಸೂರ ಜೋಡಣೆ, ಕಣ್ಣಿನ ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ಮತ್ತಿತರೆ ಸೌಲಭ್ಯ ದೊರೆಯಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು. ಡಾ.ರಮೇಶ್, ಡಾ.ಸಿದ್ದಲಿಂಗಸ್ವಾಮಿ, ಡಾ.ಲೋಕೇಶ್, ಹೇಮಂತ್ ಕುಮಾರ್, ಅಪ್ಸರ್ ಪಾಷ ಮತ್ತಿತರರಿದ್ದರು.