'ಉಪ್ಪಾರ ಸಮಾಜ ಯಾವುದೇ ಪಕ್ಷಕ್ಕೆ ಸೀಮಿತವಲ್ಲ'
ತಿಪಟೂರು: ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಕಿಬ್ಬನಹಳ್ಳಿ ಲಿಂಗಪ್ಪ ಮತ್ತು ಪದಾಧಿಕಾರಿ ಕನ್ನುಘಟ್ಟದ ಶಿವರಾಮಯ್ಯ ಮತ್ತಿತರರು ಬಿಜೆಪಿ ಅಭ್ಯರ್ಥಿ ಬಿ.ಸಿ.ನಾಗೇಶ್ ಅವರೊಂದಿಗೆ ಶಾಮೀಲಾಗಿ ಉಪ್ಪಾರ ಸಮಾಜ ಅವರಿಗೆ ಮತ ನೀಡಬೇಕೆಂದು ಮನೆಮನೆಗೆ ತೆರಳಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಉಪ್ಪಾರ ಸಮಾಜದ ಕಾರ್ಯದರ್ಶಿ ಕರೀಕೆರೆ ರಾಜಶೇಖರಯ್ಯ, ಸಹ ಕಾರ್ಯದರ್ಶಿ ನಂಜುಂಡಸ್ವಾಮಿ ಮತ್ತು ಕೈದಾಳ ಪುಟ್ಟಣ,ಶಿವಣ್ಣ ಮತ್ತಿತರರು ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ಬಿ.ಸಿ.ನಾಗೇಶ್ ತಮ್ಮ ಸಮಾಜಕ್ಕೆ ಯಾವುದೇ ಅನುದಾನವಾಗಲಿ, ನಿವೇಶನವನ್ನಾಗಲೀ ಮಂಜೂರು ಮಾಡಿಸಿಲ್ಲ. 10 ವರ್ಷಗಳ ಹಿಂದೆಯೇ ನಿವೇಶನಕ್ಕಾಗಿ ಉಪ್ಪಾರ ಸಮಾಜ ಬಾಂದವರದ ನಾವೆಲ್ಲರೂ ಹಣ ಹಾಕಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಲಿಂಗಪ್ಪ ಮತ್ತು ಶಿವರಾಮಯ್ಯ ಅವರ ಸುಳ್ಳು ವದಂತಿಗೆ ಕಿವಿಗೊಡಬಾರದು ಎಂದರಲ್ಲದೆ, ಉಪ್ಪಾರ ಸಮಾಜವು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ ಎಂದು ಸಮಾಜದ ಚಿಕ್ಕಮಲ್ಲಯ್ಯ, ಮಹಾಲಿಂಗಪ್ಪ,ಉದಯ್, ಶಂಕರಪ್ಪ ಪತ್ರಿಕೆಯಲ್ಲಿ ತಿಳಿಸಿದ್ದಾರೆ.