ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಲ್ಪತರು ನಗರಿ ಸಕಲ ಸಿದ್ಧತೆ

Rashmi Kasaragodu
Updated On : 4 May 2013, 12:17 pm

ತುಮಕೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿಂದ 2594 ಮತಗಟ್ಟೆ ಸ್ಥಾಪಿಸಲಾಗಿದೆ. ಇವುಗಳನ್ನು 508 ಅತಿ ಸೂಕ್ಷ್ಮ, 627 ಸೂಕ್ಷ್ಮ, 1459 ಅತಿ ಸಾಧಾರಣ ಮತಗಟ್ಟೆಗಳಿವೆ.
ಚುನಾವಣಾ ಕರ್ತವ್ಯಕ್ಕೆ 7 ಡಿಎಸ್‌ಪಿಗಳು, 25 ಜನ ಪಿಐಗಳು, 90 ಪಿಎಸ್‌ಐಗಳು, 152 ಎಎಸ್‌ಐಗಳು, 1380 ಹೆಚ್‌ಸಿಪಿಸಿಗಳು, 1042 ಗೃಹರಕ್ಷಕದಳ ಸಿಬ್ಬಂದಿ , 25 ಅರಣ್ಯ ರಕ್ಷಕ ಸಿಬ್ಬಂದಿ, 4 ಎನ್‌ಸಿಸಿ ಅಧಿಕಾರಿಗಳು ಒಟ್ಟು 2826 ಜನ ಸಿಬ್ಬಂದಿ ಚುನಾವಣಾ ಬಂದೋಬಸ್ತ್‌ಗೆ ನೇಮಿಸಲಾಗಿದೆ.
ಹೊರಜಿಲ್ಲೆಗಳಿಂದ 2 ಜನ ಪೊಲೀಸ್ ಉಪ ಅಧೀಕ್ಷಕರು, 6 ವೃತ್ತ ನಿರೀಕ್ಷಕರು, 45 ಜನ ಪಿಎಸ್‌ಐ ಗಳು, ಎಎಸ್‌ಐಗಳು, 320 ಜನ ಹೆಚ್‌ಸಿಪಿಸಿಗಳು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 1042 ಗೃಹರಕ್ಷಕ ದಳದವರು ಮತ್ತು 25 ಜನ ಅರಣ್ಯ ರಕ್ಷಕ ಸಿಬ್ಬಂದಿ ನಿಯೋಜಿಸಲಾಗಿದೆ.
ಕೇಂದ್ರದ ಅರೆಸೇನಾಪಡೆಗಳ 19 ಕಂಪನಿಗಳಲ್ಲಿ ಸಿಆರ್‌ಪಿಎಫ್ 4 ಕಂಪನಿಗಳು, ಬಿ.ಎಸ್.ಎಫ್ -2 ಕಂಪನಿಗಳು, ಎಸ್.ಎ.ಪಿ -2 ಕಂಪನಿಗಳು, ಐ.ಟಿ.ಬಿ.ಪಿ-5 ಕಂಪನಿಗಳು, ಸಿ.ಐ.ಎಸ್.ಎಫ್ -6 ಕಂಪನಿಗಳು ಮತ್ತು 6 ಐ.ಆರ್.ಬಿ ತುಕಡಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸದರಿ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ 71 ಪ್ರಕರಣಗಳು ದಾಖಲಾಗಿದ್ದು ರು. 1,90,23,231- ಮೌಲ್ಯದ ವಾಹನಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೂ ರು. 36,48,735  ನಗದು ಹಣ ವಶಪಡಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement