ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜೆಡಿಎಸ್ ಅಭ್ಯರ್ಥಿ ಪರ ವೆಂಕಟರಮಣಪ್ಪ ಪುತ್ರ ಪ್ರಚಾರ

Rashmi Kasaragodu
Updated On : 4 May 2013, 12:16 pm

ಕ.ಪ್ರ. ವಾರ್ತೆ   ಪಾವಗಡ   ಮೇ 3
ಶಾಸಕ ವೆಂಕಟರಮಣಪ್ಪರವರ ಹಿರಿಯ ಪುತ್ರ ಎಚ್.ವಿ.ಕುಮಾರಸ್ವಾಮಿ ಅವರು, ತಮ್ಮ ಬೆಂಬಲಿಗರೊಂದಿಗೆ ಶುಕ್ರವಾರ ತಾ. ಮರಿದಾಸನಹಳ್ಳಿ, ಓಬಳಾಪುರ ರಂಗಸಮುದ್ರ ಸೇರಿದಂತೆ ನಿಡಗಲ್ ವ್ಯಾಪ್ತಿಯ ಬೆಳಿಬಟ್ಟಲು, ಶೈಲಾಪುರ ಗ್ರಾಮಗಳಿಗೆ ತೆರಳಿ ಜೆಡಿಎಸ್ ಪರ ಚುನಾವಣಾ ಪ್ರಚಾರ ಕೈಗೊಂಡಿದ್ದರು.
ಇವರು ಶೈಲಾಪುರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಬರ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ ಮೇ 5ರಂದು ಪಕ್ಷದ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ ಅವರಿಗೆ ಮತ ನೀಡುವ ಮೂಲಕ ಅತ್ಯಧಿಕ ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ಎಚ್.ವಿ.ಕುಮಾರಸ್ವಾಮಿ ಅವರೊಂದಿಗೆ ಮುಖಂಡ ಕೆ.ವಿ.ಗಿರಿರಾಜ್ ಸೀತಾರಾಮ್, ತಾಪಂ ಸದಸ್ಯೆ ಪಾರ್ವತಮ್ಮ ಹನುಮಂತರಾಯಪ್ಪ, ಮಲ್ಲಿಕಾರ್ಜುನರೆಡ್ಡಿ, ಓಬಳಾಪುರ ತಿಪ್ಪೇಸ್ವಾಮಿ, ಸತ್ಯನಾರಾಯಣರೆಡ್ಡಿ, ಡಿಶ್ ಓಬಯ್ಯ, ರಂಗಸಮುದ್ರ ಸಿ.ಟಿ.ಮಾರಪ್ಪ, ಬಿ.ಟಿ,ರಮೇಶ್, ದಿಬ್ಬಣ, ಹನುಮಪ್ಪ ರಾಮಾಂಜಿನಪ್ಪ ಸ್ಟುಡಿಯೋ ಶಿವಣ್ಣ ಮಂಜುನಾಥ್, ನಾಗಭೂಷಣ್ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement