ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜೆಡಿಎಸ್‌ಗೆ ಎಲ್ಲ ವರ್ಗದ ಆಶೀರ್ವಾದ ಬೇಕು

Rashmi Kasaragodu
Updated On : 4 May 2013, 12:14 pm

ಕ.ಪ್ರ. ವಾರ್ತೆ   ತಿಪಟೂರು   ಮೇ 3
ರಾಜ್ಯದಲ್ಲಿ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಮುಂದಿನ 5 ವರ್ಷಗಳಲ್ಲಿ 65 ಸಾವಿರ ಕೋಟಿ ರೂ ಯೋಜನೆ ರೂಪಿಸುವ ಚಿಂತನೆ ಇದೆ. ಈ ನಿಟ್ಟಿನಲ್ಲಿ ಜನತೆ ಜಾತ್ಯಾತೀತ ಜನತಾದಳವನ್ನು ಅಧಿಕಾರಕ್ಕೆ ತರುವಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿದರು.
ತಿಪಟೂರು ಜೆಡಿಎಸ್ ಅಭ್ಯರ್ಥಿ ಎಂ.ಲಿಂಗರಾಜು ಪರ ನಗರದ ಬಯಲು ರಂಗಮಂದಿರಲ್ಲಿ ಆಯೋಜಿಸಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.  
ನಿಮ್ಮ ಮನೆಯ ಮಗ ಕುಮಾರಸ್ವಾಮಿ ಬಂದಿದ್ದೇನೆ. ಒಕ್ಕಲಿಗ, ಕುರುಬ ಸೇರಿದಂತೆ ಎಲ್ಲಾ ವರ್ಗದ ಮತದಾರರು ಇಲ್ಲಿನ ಅಭ್ಯರ್ಥಿ ಲಿಂಗರಾಜು ಗೆಲುವಿಗೆ ಸಹಕರಿಸುವಂತೆ ಕೋರಿದರು. 50 ವರ್ಷಗಳಿಂದ ರಾಜ್ಯವಾಳಿದ ಕಾಂಗ್ರೆಸ್, 5ವರ್ಷ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮಾಡಿದ್ದೇನೆ ಅಲ್ಲದೆ 5ವರ್ಷ ಆಡಳಿತ ಮಾಡಿದ್ದ ಜೆಡಿಎಸ್ ಸಾಧನೆ ಏನು ಎಂಬುದನ್ನು ಅರಿತು ಮತಬಾಂಧವರು ಪಕ್ಷವನ್ನು ಅಧಿಕಾರಕ್ಕೆ ತರುವಂತೆ ತಿಳಿಸಿದರು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಹಿಂದುಳಿದ, ಅಲ್ಪಸಂಖ್ಯಾತರ, ದೇವಾಂಗ ವರ್ಗಗಳ ಎಲ್ಲಾ ಸಾಲ ಮನ್ನಾ ಹಾಗೂ ವಸತಿ ಯೋಜನೆಯಲ್ಲಿ ನಿವೇಶ ಹಾಗೂ 2ಲಕ್ಷರೂ ನೀಡುವ ಭರವಸೆ ನೀಡಿದರಲ್ಲದೆ 70 ವರ್ಷ ಮೇಲ್ಪಟ್ಟ ವೃದ್ಧರಿಗೆ ತಿಂಗಳಿಗೆ ರು. 5 ಸಾವಿರ ಮಾಸಾಶನ, ಗರ್ಭಿಣಿ
ಸ್ತ್ರೀಯರಿಗೆ ಪೌಷ್ಠಿಕ ಕೊರತೆ ನೀಗಿಸಲು 12 ತಿಂಗಳು ರು. 5 ಸಾವಿರ ನಂತೆ ಗೌರವಧನ ಮತ್ತು ವಿಧವಾ ವೇತನ 1500 ಹೆಚ್ಚಳ ಮಾಡುವುದಾಗಿ ತಿಳಿಸಿದರು.
ಅಲ್ಪಸಂಖ್ಯಾತ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಗಂಗಾಕಲ್ಯಾಣ ಯೋಜನೆ ವಿಸ್ತರಣೆ ಅಲ್ಲದೆ, ಬಿಜೆಪಿ ಸರ್ಕಾರ ಆಡಳಿತದಿಂದ ರಾಜ್ಯದಲ್ಲಿ 9 ಲಕ್ಷ ಕುಟುಂಬಕ್ಕೆ ಪಡಿತರ ಚೀಟಿ ರದ್ದಾಗಿದ್ದು ಸರಿಪಡಿಸಬೇಕಿದೆ ಹಾಗೂ ರೈತರ ಬೆಳೆಗಳ ಬೆಲೆ ಕುಸಿತ ಕಂಡಾಗ ಬೆಂಬಲ ಬೆಲೆಯಲ್ಲಿ ಖರೀದಿಸಲು 5ಸಾವಿರ ಕೋಟಿ ಆವರ್ತ ನಿಧಿ ನಿಗದಿ ಮಾಡುವುದಾಗಿ ಭರವಸೆ ನೀಡಿದರು.
ಕೇಂದ್ರದ  ಕಾಂಗ್ರೆಸ್, ರಾಜ್ಯದ ಬಿಜೆಪಿ ಸರ್ಕಾರ ಕಾವೇರಿ ವಿವಾದ ಬಗೆಹರಿಸಲು ವಿಫಲವಾಗಿದ್ದು, ಕಾವೇರಿ ನಿರ್ಣಯ ಸಮಿತಿಯಿಂದ ರಾಜ್ಯಕ್ಕೆ ಅನ್ಯಾಯವಾಗಲಿದ್ದು, ಇದರಿಂದ ಹೇಮಾವತಿ ಹರಿಯುವ ತುಮಕೂರು ಜಿಲ್ಲೆಯ ಎಲ್ಲಾ ತಾಲೂಕಿನ ಕೆರೆಗಳಿಗೆ ನೀರಿಲ್ಲದಂತಾಗುತ್ತದೆ ಎಂದರು.
ಕಣ್ಣೀರಿಟ್ಟ ಅಭ್ಯರ್ಥಿ ಲಿಂಗರಾಜು: ಕುಮಾರಸ್ವಾಮಿ ಮಾತು ಮುಗಿಸಿ ಹೊರಟ ತಕ್ಷಣ ಅಭ್ಯರ್ಥಿ ಲಿಂಗರಾಜು ಮತದಾರರ ಮನಮೊಲಿಸಲು ನನಗೆ ಯಾವುದೇ ಪಕ್ಷ ಗುರುತಿಸಿರಲಿಲ್ಲ. ಕುರುಬ ಸಮಾಜವನ್ನು ಗುರ್ತಿಸಿ ಈ ಬಾರಿ ಜೆಡಿಎಸ್ ಟಿಕೆಟ್ ಕೊಟ್ಟಿದ್ದು, ಮನೆ, ಆಸ್ತಿ ಮಾರಿ ಕಣಕ್ಕಿಳಿದಿದ್ದೇನೆ. ಮತದಾರರು ಕೈಬಿಡಬೇಡಿ ಪ್ರಾಣ ಉಳಿಸಿ ಎಂದು ಕಣ್ಣೀರಿಟ್ಟರು.
ತಾಲೂಕು ಜೆಡಿಎಸ್ ಅಧ್ಯಕ್ಷ ಗುರುಮೂರ್ತಿ, ನಗರ ಘಟಕದ ಅಧ್ಯಕ್ಷ ನಟರಾಜು, ರಾಜ್ಯ ಮಹಿಳಾ ಕಾರ್ಯದರ್ಶಿ ರೇಖಾ ಅನೂಪ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಕಾರ್ಯಕರ್ತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement