ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿಎಸ್ಪಿ ರೋಡ್ ಶೋ ಮತ ಯಾಚನೆ

Rashmi Kasaragodu
Updated On : 4 May 2013, 12:16 pm

ಕ.ಪ್ರ. ವಾರ್ತೆ   ಮಧುಗಿರಿ   ಮೇ 3
ಬಿಎಸ್ಪಿ ಅಭ್ಯರ್ಥಿ ಕೋರಮಂಗಲ ಮುನಿಯಪ್ಪ ಪರ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಪಟ್ಟಣದ ಶಿರಾ ಗೇಟ್‌ನಿಂದ ಸಂತೆ ಮೈದಾನದವರೆಗೆ ರೋಡ್ ಶೋ ನಡೆಸಿ  ಮತ ಯಾಚಿಸಿದರು.
ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾರಸಂದ್ರ ಮುನಿಯಪ್ಪ, ರಾಜ್ಯದಲ್ಲಿ ಬಿಎಸ್ಪಿ ಒಳ್ಳೆಯ ಕೆಲಸ ಮಾಡಲಿರುವ ಕಾರಣ ತಮ್ಮ ಅಭ್ಯರ್ಥಿಗಳಿಗೆ ಕೆಲ ರಾಜಕೀಯ ಪಕ್ಷಗಳ ಮುಖಂಡರು ಧಮಕಿ ಹಾಕಿದ್ದಾರೆ ಎಂದು ಕಿಡಿಕಾರಿ, ಎಲ್ಲ ರಾಜಕೀಯ ಪಕ್ಷಗಳಿಗೆ ಸರಿ ಸಮನಾಗಿ ಬಿಎಸ್ಪಿ ಚುನಾವಣೆಯಲ್ಲಿ ಪೈಪೋಟಿ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಭ್ಯರ್ಥಿ ಕೋರಮಂಗಲ ಮುನಿಯಪ್ಪ ಮಾತನಾಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಂದ ತಮಗೆ ಜೀವ ಬೆದರಿಕೆಯಿದ್ದು, ನಮ್ಮ ಪಕ್ಷದ ಹಿಂದೆ ಜನ ಬೆಂಬಲ ಇರುವುದನ್ನು ಮನಗಂಡು ನನಗೆ ಬೆದರಿಕೆ ಹಾಕುತ್ತಿದ್ದಾರೆ. ಆದರೆ ಇಂತಹ ಗೊಡ್ಡು ಬೆದರಿಕೆಗೆ ನಾನು ಸೊಪ್ಪು ಹಾಕುವವನಲ್ಲ. ನನಗೆ ಏನಾದರೂ ಆದರೆ ಈ ಎರಡು ಪಕ್ಷಗಳೇ ನೇರ ಹೊಣೆ ಎಂದು ಆರೋಪಿಸಿದ ಅವರು, ತಾಲೂಕಿನಲ್ಲಿ ಈ ಸಲ ಬಿಎಸ್ಪಿ ಅಮೋಘ ಸಾಧನೆ ಮಾಡಲಿದೆ. ಮಾದಿಗ-ಛಲವಾದಿ ಒಕ್ಕೂಟದ ಹೆಸರಿನಲ್ಲಿ ನನ್ನ ವಿರುದ್ಧ ಸಿದ್ದಯ್ಯ ಎಂಬಾತ ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರವಾದ ಸಂಗತಿ. ಆದ ಕಾರಣ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವಾಗ ಒಂದು ಸಲ ಆನೆ ನೆನೆದು ಮತ ಚಲಾಯಿಸಿ. ಎಲ್ಲರೂ ಒಗ್ಗಟ್ಟಾಗಿ ಮಧುಗಿರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಮನವಿ ಮಾಡಿದರು.
ಬಿಎಸ್ಪಿ ರಾಜ್ಯ ಮುಖಂಡ ಅಶೋಕ್ ಸಿದ್ಧಾರ್ಥ, ಜಯಪ್ರಕಾಶ್, ತಾ.ಅಧ್ಯಕ್ಷ ದೊಡ್ಡೇರಿ ಕಣಿಮಯ್ಯ, ವಕೀಲ ಬೆಲ್ಲದಮಡು ಶಿವಕುಮಾರ್, ಸವಿತಾ, ಹಂದ್ರಾಳು ರಾಮಾಂಜಿ, ನಾಗರಾಜು, ತೆರಿಯೂರು ಅಂಜಯ್ಯ ಇನ್ನು ಅನೇಕರು ಉಪಸ್ಥಿತರಿದ್ದರು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement