ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆ
ಪಾವಗಡ: ಎಲ್ಲಾ ವರ್ಗದ ಬೆಂಬಲ ಹಾಗೂ ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ಈ ಬಾರಿ ಜೆಡಿಎಸ್ ಗೆಲುವು ಶತಸಿದ್ಧ ಎಂದು ದಲಿತ ವರ್ಗದ ಹಿರಿಯ ಮುಖಂಡ ಕಡಪಲಕೆರೆ ಪಾತಲಿಂಗಪ್ಪ ತಿಳಿಸಿದರು. ಅವರು ಶುಕ್ರವಾರ ತಿರುಮಣಿ ವ್ಯಾಪ್ತಿಯ ನಾಗೇನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನಾಯಕತ್ವ, ತಾಲೂಕು ಜೆಡಿಎಸ್ ಮುಖಂಡರ ಸೇವೆ ಹಿನ್ನಲೆಯಲ್ಲಿ ಎಲ್ಲಾ ವರ್ಗದ ವಿಶ್ವಾಸಗಳಿಸಿರುವ ಜೆಡಿಎಸ್ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ ಗೆಲವು ಸಾಧಿಸಲಿದ್ದಾರೆ ಎಂದು ಪ್ರತಿಪಾದಿಸಿದರು. ಅರ್ಥಿಕ, ಸಾಮಾಜಿಕ ರಾಜಕೀಯ ಅಭಿವೃದ್ಧಿ ಹಿನ್ನಲೆಯಲ್ಲಿ ಕ್ಷೇತ್ರದ ಬಹುಸಂಖ್ಯಾತ ದಲಿತರು ಕೆ.ಎಂ.ತಿಮ್ಮರಾಯಪ್ಪರನ್ನು ಆರಿಸುವ ಮೂಲಕ ಜೆಡಿಎಸ್ ಅಧಿಕಾರಕ್ಕೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.