ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಸಾಲೆ ಜಯರಾಂ ಹರಕೆಯ ಕುರಿ: ಸಂಪಿಗೆ ಶ್ರೀಧರ್

Rashmi Kasaragodu
Updated On : 4 May 2013, 12:17 pm

ಕ.ಪ್ರ.ವಾರ್ತೆ   ತುರುವೇಕೆರೆ   ಮೇ 3
ಎಂ.ಡಿ.ಲಕ್ಷ್ಮೀನಾರಾಯಣ್ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡಿದರೆ ಠೇವಣಿಯೂ ಬರುವುದಿಲ್ಲ ಎಂಬ ಖಚಿತ ನಂಬಿಕೆ ಇದ್ದುದರಿಂದ ಮಸಾಲೆ ಜಯರಾಂ ಎಂಬವರನ್ನು ಕ್ಷೇತ್ರಕ್ಕೆ ಕರೆತಂದು ಹರಕೆಯ ಕುರಿಯನ್ನಾಗಿಸಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಸಂಪಿಗೆ ಶ್ರೀಧರ್ ಟೀಕಿಸಿದರು.
ತಾಲೂಕಿನ ಮಾಯಸಂದ್ರದಲ್ಲಿ ಬಿಜೆಪಿ ಪರ ಮತಯಾಚನಾ ವೇಳೆ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಈಗ ಕೆಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಈ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಎಂ.ಡಿ. ಲಕ್ಷ್ಮೀನಾರಾಯಣ್‌ರವರಿಗೆ ಬಿಜೆಪಿಯು ಎಲ್ಲ ಸ್ಥಾನಮಾನ ಗೌರವಗಳನ್ನು ನೀಡಿತ್ತು. ಆದರೂ ಎಂ.ಡಿ.ಲಕ್ಷ್ಮೀನಾರಾಯಣ್ ಪ್ರಗತಿ ಪರವಾದ ಕಾರ್ಯ ಮಾಡಲೇ ಇಲ್ಲ. ಕೇವಲ ರಿಯಲ್ ಎಸ್ಟೇಟ್ ದುಡಿಮೆಯಲ್ಲಿ ತೊಡಗಿಕೊಂಡು ಕೋಟ್ಯಂತರ ರುಪಾಯಿ ಬಾಚಿಕೊಂಡರು. ಶಾಸಕ ಕೃಷ್ಣಪ್ಪನವರು ದಂಡಿನಶಿವರ ಹೋಬಳಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದರು.
ಎಂಎಸ್‌ಐಎಲ್‌ನ ಅಧ್ಯಕ್ಷ ನಂದೀಶ್, ಟಿ.ಎಸ್.ಬೋರೇಗೌಡ, ಅರಳೀಕೆರೆ ರವಿಕುಮಾರ್, ಕಲ್ಕೆರೆ ಮೃತ್ಯುಂಜಯ, ಮಂಜೇಗೌಡ, ಗುರುಸಿದ್ದಪ್ಪ, ಸಂಪಿಗೆ ಮಲ್ಲಿಕಾರ್ಜುನ್, ಮಾವಿನಕೆರೆ ಲಿಂಗಪ್ಪ, ಭೈರಣ್ಣ, ಶ್ರೀನಿವಾಸ್ ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement