ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

210 ಮತಗಟ್ಟೆಗಳಿಗೆ ತೆರಳಿದ ಚುನಾವಣಾ ಸಿಬ್ಬಂದಿ

Rashmi Kasaragodu
Updated On : 5 May 2013, 12:10 pm

ಕ.ಪ್ರ. ವಾರ್ತೆ   ಗುಬ್ಬಿ   ಮೇ 4
ಭಾನುವಾರ ನಡೆಯಲಿರುವ ಗುಬ್ಬಿ ವಿಧಾನಸಭಾ ಕ್ಷೇತ್ರದ ಮತದಾನ ಕಾರ್ಯಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿರುವ ಚುನಾವಣಾ ಆಯೋಗ ಕ್ಷೇತ್ರದ 210 ಮತಗಟ್ಟೆಗಳಿಗೆ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ಅಗತ್ಯವಿರುವ ಚುನಾವಣಾ ಸಿಬ್ಬಂದಿಯನ್ನು ಮತಗಟ್ಟೆಗೆ ಕಳುಹಿಸುವ ಕಾರ್ಯ ಮೇ 4 ರಂದು ನಡೆಯಿತು.
ಗುಬ್ಬಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬೆಳಿಗ್ಗೆ 5 ಗಂಟೆಗೆ ವಿವಿಧ ತಾಲೂಕುಗಳಿಗೆ ಚುನಾವಣಾ ಕಾರ್ಯಕ್ಕೆ ತೆರಳುವ ಸಿಬ್ಬಂದಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ನಂತರ 8 ಗಂಟೆಗೆ ವಿವಿಧ ತಾಲೂಕುಗಳಿಂದ ನೇಮಕವಾದ ಸಿಬ್ಬಂದಿಗಳು ಆಗಮಿಸಿ  14 ಕೌಂಟರ್‌ಗಳಲ್ಲಿ ನಿಯೋಜನೆಗೊಂಡ ಬೂತ್‌ಗಳ ಚುನಾವಣಾ ಸಿಬ್ಬಂದಿ ಮತಯಂತ್ರ, ಸೀಲು ಇನ್ನಿತರ ಸಾಮಗ್ರಿಗಳನ್ನು ಪಿಆರ್‌ಒ ತಮ್ಮ ಸದಸ್ಯರೊಂದಿಗೆ ಪಡೆದು ಪರಿಶೀಲಿಸಿದರು. ಮತಯಂತ್ರ ದೋಷವಿರುವವರು ಮತಯಂತ್ರ ರಿಪೇರಿ ಮಾಡಿಸಿಕೊಂಡರು. ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದ ಮತಯಂತ್ರಗಳನ್ನು ಬದಲಾಯಿಸಿಕೊಂಡರು.
210 ಎಪಿಆರ್‌ಒ, ಪ್ರತಿ ಮತಗಟ್ಟೆಗೆ ಇಬ್ಬರು ಸಹಾಯಕರು ಮತ್ತು ಒಬ್ಬರು ಪೊಲೀಸರನ್ನು ನಿಯೋಜಿಸಲಾಯಿತು. ಒಟ್ಟು 300  ಪೊಲೀಸರು 200 ಹೋಂಗಾರ್ಡ್ ನಿಯೋಜನೆ ಮತ್ತು ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಿಗೆ ಅರೆ ಮಿಲಿಟರಿ ಪಡೆಯನ್ನು ನಿಯೋಜಿಸಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement