ಕಲಾವಿದರಿಂದ ಮತದಾರರ ಜಾಗೃತಿ
ಹಾಸನ: ಜಿಲ್ಲೆ ಮತದಾರರ ಜಾಗೃತಿ ಹಾಗೂ ಶಿಕ್ಷಣ ಸಮಿತಿ ಜಿಲ್ಲೆಯ ವಿವಿಧೆಡೆ ಮತದಾರರ ಜಾಗೃತಿಗಾಗಿ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಕೈಗೊಂಡಿತು. ಯಕ್ಷಗಾನ, ನಾಸಿಕ್ ಡೋಲುಗಳು ನಗರದ ಬಹು ಭಾಗಗಳಲ್ಲಿ ಸಂಚರಿಸಿ ಮೇ 5 ರಂದು ನಡೆಯುವ ಮತದಾನದಲ್ಲಿ ತಪ್ಪದೇ ಪಾಲ್ಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸುವಂತೆ ಪ್ರೇರೇಪಿಸಿದವು. ಸಕಲೇಶಪುರದಲ್ಲಿ ಯಕ್ಷಗಾನ ಕಲಾವಿದರು ಮೆರವಣಿಗೆಯಲ್ಲಿ ತೆರಳಿ ಮತದಾರರ ಜಾಗೃತಿಯಲ್ಲಿ ತೊಡಗಿದರೆ, ಚನ್ನರಾಯಪಟ್ಟಣದಲ್ಲಿ ಡೊಳ್ಳು ಕುಣಿತ ಹಾಗೂ ಪೂಜಾ ಕುಣಿತ ತಂಡಗಳು ಮತದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು.
ಮಿನಿಬಸ್ ಡಿಕ್ಕಿ: ವೃದ್ಧೆ ಸಾವು
ಗುಬ್ಬಿ: ತಾಲೂಕಿನ ಕಳ್ಳಿಪಾಳ್ಯದ ರಸ್ತೆ ಬದಿಯಲ್ಲಿ ನಿಂತಿದ್ದ ಮಿನಿಬಸ್ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಗೌರಿ (60) ಸಾವನ್ನಪ್ಪಿ ಹಾಗೂ ಮಿನಿಬಸ್ನಲ್ಲಿದ 14 ಪ್ರಯಾಣಿಕರಿಗೆ ತೀವ್ರಗಾಯವಾದ ಘಟನೆ ನಡೆದಿದೆ. ಗುಬ್ಬಿ ತಾಲ್ಲೂಕಿನ ನಿಟ್ಟೂರು ಕಡೆಯಿಂದ ಬೆಂಗಳೂರಿಗೆ ಪ್ರಯಣಮಾಡುತಿದ್ದ ಕಾಸಗಿ ಬಸ್ ಕಳ್ಳಿಪಾಳ್ಯದ ರಸ್ತೆ ಬದಿಯಲ್ಲಿ ನಿಂತಿದ್ದ ಮಿನಿಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕರಿಗೆ ತೀವ್ರಗಾಯವಾಗಿದೆ. ಗಾಯಗೊಂಡವರನ್ನು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗುಬ್ಬಿ ಪಿಎಸ್ಐ ಮಾರ್ಕಂಡಯ್ಯ ತಿಳಿಸಿದ್ದಾರೆ.
ಹಾವು ಕಚ್ಚಿ ಬಾಲಕ ಸಾವು
ಪಾವಗಡ: ತಮ್ಮ ಮನೆಯ ಹಜಾರದಲ್ಲಿ ಆಟವಾಡುತ್ತಿರುವಾಗ ಆಕಸ್ಮಾತ್ ಹಾವೊಂದು ಕಚ್ಚಿದ ಪರಿಣಾಮ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಶನಿವಾರ ಬಿ.ಅಚ್ಚಮ್ಮನಹಳ್ಳಿಯಲ್ಲಿ ನಡೆದಿದೆ. ಹಾವು ಕಚ್ಚಿ ಮೃತ ಪಟ್ಟ ಬಾಲಕ ವಿಜಯ್ (12). ಬಿ.ಅಚ್ಚಮ್ಮನಹಳ್ಳಿ ಗ್ರಾಮದ ರಾಮಾಂಜಿನಪ್ಪ ಅವರ ಪುತ್ರ ವಿಜಯ್ ಎಂಬ ಬಾಲಕ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಬೇಸಿಗೆ ರಜೆ ಇದ್ದ ಕಾರಣ ಮನೆಯಲ್ಲಿದ್ದು ಬೆಳಿಗ್ಗೆ ತಮ್ಮ ಮನೆಯ ಮುಂದೆ ಹಜಾರದಲ್ಲಿ ಆಟವಾಡುತ್ತಿದ್ದಾಗ ಹಿಂಬದಿಯಿಂದ ಬಂದ ಹಾವೊಂದು ಅಕಸ್ಮಾತ್ ಬಾಲಕನ ಕಾಲಿಗೆ ಕಚ್ಚಿದೆ. ಪಿಎಸ್ಐ ರಾಮಕೃಷ್ಣಪ್ಪ ಪ್ರಕರಣ ದಾಖಲಿಸಿಕೊಂಡಿದ್ದಾರೆ.