ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಕಲಿ ಮತದಾನ ಅಪರಾಧ

Rashmi Kasaragodu
Updated On : 5 May 2013, 12:11 pm

ಕ ಪ್ರ ವಾರ್ತೆ ಮಧುಗಿರಿ ಮೇ 4
ನಕಲಿ ಮತದಾನ  ಮಾಡುವುದು ಅಪರಾಧ ಎಂದು ಡಿಡಿಪಿಐ ಆಂಜನಪ್ಪ ಹೇಳಿದ್ದಾರೆ.
ಮಿಡಿಗೇಶಿ  ಹೋಬಳಿ ಮಟ್ಟದಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನಕಲಿ ಮತದಾನ ಅಪರಾಧ. ಹಾಗಾಗಿ 18 ವರ್ಷ ಮೀರಿದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ಮತದಾನದ ಹಕ್ಕು ನೀಡಿದೆ. ಮತದಾರರ ಗುರುತಿನ ಚೀಟಿ ಕಳೆದು ಹೋಗಿದ್ದಲ್ಲಿ ಬಿಎಲ್‌ಓ  ಅವರಿಗೆ ಅರ್ಜಿ ಸಲ್ಲಿಸಬೇಕು. ತಮ್ಮ ಹಾಗೂ ಕುಟುಂಬದ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದರ ಬಗ್ಗೆ ತಮ್ಮ ಗ್ರಾಮದ ಶಾಲೆ, ಅಂಗನವಾಡಿ ಅಥವಾ ಬಿಎಲ್‌ಓ ಅವರಲ್ಲಿ ಖಚಿತಪಡಿಸಿಕೊಳ್ಳಬೇಕು.
 ಮತದಾನ ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ನಡೆಯುವುದರಿಂದ ಅರ್ಹ ಮತದಾರರೆಲ್ಲರೂ ಕಡ್ಡಾಯವಾಗಿ ಮತದಾನ ಮಾಡುವುದು. ನಿಮ್ಮ ಒಂದು ಮತ ದೇಶದ ಭವಿಷ್ಯವನ್ನು ಬದಲಿಸುವ ಶಕ್ತಿಯಿದೆ. ಚುನಾವಣೆ ದಿನ ಯಾವ ಊರಿಗೂ ಹೋಗದೆ ನಿಮ್ಮ ವ್ಯಾಪ್ತಿಯ ಮತಗಟ್ಟೆಗೆ  ಹೋಗಿ ಮತ ಚಲಾಯಿಸಿ.  ನಿಮ್ಮ ಸುತ್ತಮುತ್ತ ವೃದ್ಧರು, ಅಶಕ್ತರು ಇದ್ದರೆ ಅವರನ್ನು ಕರೆದುಕೊಂಡು ಹೋಗಿ ಮತದಾನ ಮಾಡಲು ಸಹಕರಿಸಿ ಮತದಾನ ಮಾಡಲು ಎಲ್ಲರಿಗೂ ಪ್ರೇರೇಪಿಸಿ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪವಿತ್ರವಾದ ಮತದಾನ ಕಾರ್ಯವನ್ನು ತಂತಮ್ಮ ಮತಗಟ್ಟೆಯಲ್ಲಿ ಮಾಡುವಂತೆ ಜಾಗೃತಿ ಮೂಡಿಸಿದರು. ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಮಹಾಲಿಂಗಯ್ಯ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಂ. ಚಂದ್ರಪ್ಪ,
ತಾಲೂಕು ಸಂಯೋಜಕ ಎಂ.ತಿಪ್ಪೇಸ್ವಾಮಿ ಉಪಸ್ಥಿತರಿದ್ದರು. ಪ್ರೇರಕರು, ಸ್ವಯಂಪ್ರೇರಕರು ಮತದಾರರಿಗೆ ಕರಪತ್ರ ಹಂಚಿದರು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement