ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರೀಡ್‌ಬಡ್ಸ್ ಸಂಸ್ಥೆಮತದಾನ ಜಾಗೃತಿ

Rashmi Kasaragodu
Updated On : 5 May 2013, 12:10 pm

ಹಾಸನ: ಕಾರ್ಮಿಕ ಇಲಾಖೆಯಿಂದ ನಿರೀಕ್ಷಕ ಪಿ.ಜಿ. ಬಾಲಾಜಿ ಅವರು ಕೈಗಾರಿಕಾ ಪ್ರದೇಶದಲ್ಲಿರುವ  ರೀಡ್‌ಬಡ್ಸ್ ಸಂಸ್ಥೆಗೆ ಭೇಟಿ ನೀಡಿ ಆಡಳಿತ ವರ್ಗದವರ ಸಹಕಾರದಿಂದ ಅಲ್ಲಿನ 48 ಕಾರ್ಮಿಕರಿಗೆ ಚುನಾವಣಾ ಆಯೋಗ ಪ್ರಕಟಿಸಿರುವ ಕರಪತ್ರಗಳನ್ನು ವಿತರಿಸಿ, 5 ರಂದು ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ನಡೆಯುವ ವಿಧಾನಸಭಾ ಚುನಾವಣೆಗೆ ತಮ್ಮ ಸಂವಿಧಾನಾತ್ಮಕ ಹಕ್ಕು ಮತವನ್ನು ವಿವೇಚನೆಯಿಂದ ಹಾಕುವಂತೆ ಮಾಹಿತಿ ನೀಡಿದರು ಎಂದು ಕೆ.ಎನ್. ಪ್ರಹ್ಲಾದ ತಿಳಿಸಿದ್ದಾರೆ.
ಮತದಾನ ಜಾಗೃತಿ ಅಭಿಯಾನ
ಮೈಸೂರು: ಸಾರ್ವಜನಿಕರಲ್ಲಿ ಮತದಾನದ ಮಹತ್ವ ಮೂಡಿಸುವ ಸಲುವಾಗಿ ಜೆಎಸ್‌ಎಎಸ್ ವೈದ್ಯಕೀಯ ಕಾಲೇಜು ವಿತಿಯಿಂದ ಮತದಾರರ ಜಾಗೃತಿ ಅಭಿಯಾನ ಏರ್ಪಡಿಸಲಾಗಿತ್ತು.  ಕಾಲೇಜಿನ ಎನ್‌ಎಸ್‌ಎಸ್ ಘಟಕವು ವಾಲೆಂಟಿಯರ್ ಫಾರ್ ಎ ಬೆಟರ್ ಇಂಡಿಯಾ ಸ್ವಯಂಸೇವಾ ಸಂಘಟನೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಈ ಓಟಾಥಾನ್ ನಡಿಗೆಯಲ್ಲಿ ವಿವಿಧ ಘೋಷಣೆಗಳನ್ನು ಭಿತ್ತರಿಸುವ ಮೂಲಕ ವಿದ್ಯಾರ್ಥಿಗಳು ಚುನಾವಣೆಯ ಭ್ರಷ್ಟಾಚಾರಕ್ಕೆ ಮತದಾರರು ಒಳಗಾಗದಂತೆ ಹಾಗೂ ತಮ್ಮ ಹಕ್ಕನ್ನು ಕಡ್ಡಾಯವಾಗಿ ಮತ್ತು ಪ್ರಾಮಾಣಿಕವಾಗಿ ಚಲಾಯಿಸುವಂತೆ ಮನವಿ ಮಾಡಿದರು.  ಶಿವರಾತ್ರೀಶ್ವರ ನಗರದಿಂದ ಆರಂಭವಾದ ಈ ಅಭಿಯಾನವು, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಸಯ್ಯಾಜಿರಾವ್ ರಸ್ತೆ, ಡಿ. ದೇವರಾಜ ಅರಸ್ ರಸ್ತೆ ಮುಖಾಂತರ ಪುರಭವನದಲ್ಲಿ ಅಂತ್ಯಗೊಂಡಿತು. ಸುಮಾರು 150 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಹೊಳೆನರಸೀಪುರ ಕ್ಷೇತ್ರ ಸಿದ್ಧ
ಹೊಳೆನರಸೀಪುರ: ಪ್ರತಿಷ್ಠಿತ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಸಮರಕ್ಕೆ ವೇದಿಕೆ ಸಿದ್ದವಾಗಿದ್ದು,  ಕಣದಲ್ಲಿರುವ ಪ್ರತ್ಠಿತ ಅಭ್ಯರ್ಥಿಗಳಾದ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಹಾಗೂ ಕಾಂಗ್ರೆಸ್‌ನಿಂದ ಎಸ್.ಜಿ. ಅನುಪಮ ಸ್ಪರ್ಧಿಸಿದ್ದಾರೆ. 1,97,828 ಮತದಾರರು ಭಾಗವಹಿಸಲಿದ್ದಾರೆ.  ಐದಾರು ದಶಕಗಳ ಇಲ್ಲಿನ ರಾಜಕಾರಣದಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಒಕ್ಕಲಿಗ ಸಮುದಾಯದಿಂದ ಹೊರತಾದವರು ಜಯಗಳಿಸಿದ್ದು ಬಿಟ್ಟರೆ, ಇನ್ನುಳಿದಂತೆ  ಈ ಕ್ಷೇತ್ರ ಒಕ್ಕಲಿಗ ನಾಯಕರಿಬ್ಬರ ನಡುವಿನ ಹೋರಾಟಕ್ಕೆ ಜಯಾಪಜಯಗಳನ್ನು ನೀಡುತ್ತಲೇ ಬಂದಿದೆ. ಪ್ರಸಕ್ತ ಚುನಾವಣೆಯಲ್ಲಿ ಕಣದಲ್ಲಿ ಹತ್ತು ಅಭ್ಯರ್ಥಿಗಳಿದ್ದರೂ ಉಳಿದವರೆಲ್ಲರೂ ಗೌಣ, ಜೆಡಿಎಸ್, ಕಾಂಗ್ರೆಸ್ ನಡುವೆ ಸ್ಪರ್ಧೆ ಇದೆ.  
ಮತದಾನಕ್ಕೆ ಮನವಿ
ಮೈಸೂರು: ಮೈಸೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಯ ಎಲ್ಲಾ ಸದಸ್ಯರು, ನಗರದ ಎಲ್ಲಾ ನಾಗರಿಕರು ಕಡ್ಡಾಯವಾಗಿ ಮತದಾನ ಮಾಡಿ, ಉತ್ತಮ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂದು ಅಧ್ಯಕ್ಷ ಎಸ್. ಸುಧಾಕರ ಶೆಟ್ಟಿ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement