ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿಜೃಂಭಣೆಯ ದುರ್ಗಮ್ಮನ ಕಳಸ

Rashmi Kasaragodu
Updated On : 5 May 2013, 12:11 pm

ಹುಳಿಯಾರು: ಗುರುವಾರ ನಡೆದ ಗ್ರಾಮದೇವತೆ ದುರ್ಗಾಪರಮೇಶ್ವರಿ ಅಮ್ಮನವರ ಕಳಸ ಕಾರ್ಯಕ್ರಮದಲ್ಲಿ ನೂರನಲವತ್ತಕ್ಕೂ ಹೆಚ್ಚು  ಹೆಣ್ಣು ಮಕ್ಕಳು ಕಳಸ ಹೊತ್ತು ಹರಕೆ ತೀರಿಸಿದರು.
ಬೆಳಗಿನ ಜಾವ ನಾಲ್ಕುಗಂಟೆಯಿಂದಲೇ ಕೆರೆ ಬಾವಿ ಸಮೀಪ ಮಕ್ಕಳೊಂದಿಗೆ ಆಗಮಿಸಿದ್ದ ಪೋಷಕರು ಪಟ್ಟದ ಕಳಸಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಧಾರ್ಮಿಕ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು. ಕಳೆದ ರಾತ್ರಿ ಹುಳಿಯಾರಮ್ಮ, ಕೆಂಚಮ್ಮ, ಗೌಡಗೆರೆ ದುರ್ಗಮ್ಮ, ತಿರುಮಲಾಪುರದ ಕೊಲ್ಲಾಪುರದಮ್ಮ, ದಮ್ಮಡಿಹಟ್ಟಿಯ ಈರಬೊಮ್ಮಕ್ಕದೇವಿ, ಕೆ.ಸಿ.ಪಾಳ್ಯದ ಅಂತರಘಟ್ಟಮ್ಮ ದೇವಿ, ಹೊಸಹಳ್ಳಿಯ ಅಂತರಘಟ್ಟಮ್ಮ ಅವರ ಕೂಡು ಭೇಟಿ ನಡೆದು ಬೆಳಗಿನ ಜಾವ ಎಲ್ಲಾ ದೇವರು  ಕೆರೆ ಬಾವಿ ಹತ್ತಿರ ಆಗಮಿಸಿದವು. ಊರಿನಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಹಾಗೂ ಇತರೆ ಕಾರಣಗಳಿಗೆ ಹರಕೆ ಹೊತ್ತವರು ತಮ್ಮ ಹೆಣ್ಣು ಮಕ್ಕಳಿಗೆ ಕಳಸ ಹೊರಿಸುವುದು ಇಲ್ಲಿನ ಸಂಪ್ರದಾಯ. ಅದರಂತೆ ಇಂದು ನೂರನಲವತ್ತಕ್ಕೂ ಹೆಚ್ಚು  ಹೆಣ್ಣು ಮಕ್ಕಳು ಕಳಸ ಹೊತ್ತು ನಡೆಮುಡಿ ಮೇಲೆ ಊರಿನ ರಾಜ ಬೀದಿಗಳಲ್ಲಿ ನಡೆದು ದೇವಾಲಯದಲ್ಲಿ ಕಳಸ ವಿಸರ್ಜಿಸುವ ಮೂಲಕ ಹರಕೆ ತೀರಿಸಿದರು. ಈ ಕಾರ್ಯಕ್ರಮದಲ್ಲಿ ಸಹಸ್ರಾರು ಜನ ಸೇರಿದ್ದು ಕಳಸ ಮಹೋತ್ಸವಕ್ಕೆ ಮೆರುಗು ತಂದಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement