ಅರಸೀಕೆರೆ: ಬಿರುಗಾಳಿ ಮಳೆ- ಕರೆಂಟ್ ಕಟ್
ಕ.ಪ್ರ.ವಾರ್ತೆ ಅರಸೀಕೆರೆ ಮೇ 5
ತಾಲೂಕಿನ ಬಹುತೇಕ ಭಾಗಗಳಲ್ಲಿ ಭಾನುವಾರ ಬಿರುಗಾಳಿ ಸಹಿತ ಬಾರಿ ಮಳೆ ಸುರಿದು ಅನೇಕ ತೆಂಗಿನ ಮರಗಳು ಧರೆಗುರುಳಿದ ಪರಿಣಾಮ ರೈತರಿಗೆ ಲಕ್ಷಾಂತರ ರು. ನಷ್ಟ ಸಂಭವಿಸಿದೆ. ವಿದ್ಯುತ್ ತಂತಿಗಳು ಹರಿದು ಬಿದ್ದ ಕಾರಣ ಪಟ್ಟಣದ ಪ್ರದೇಶ ಸೇರಿದಂತೆ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಮಧ್ಯಾಹ್ನ ಮಾಡಾಳು ಡಿ.ಎಂ.ಕುರ್ಕೆ, ಹೊಳಲ್ಕೆರೆ, ಜೆ.ಸಿ.ಪುರ, ಶಂಕರನಹಳ್ಳಿ, ಅಗ್ಗುಂದ ಮತ್ತು ಬೊಮ್ಮೆನಹಳ್ಳಿ ಗ್ರಾಮಗಳಲ್ಲಿ ಚುನಾವಣೆ ಶುಭ ಸಂಕೇತ ಎಂಬಂತೆ ಬಾರಿ ಬಿರುಗಾಳಿಯಿಂದ ಕೂಡಿದ ಮಳೆ ಸುರಿಯಿತು. ಭಾರೀ ಬಿರುಗಾಳಿ ಬೀಸಿದ ಹಿನ್ನೆಲೆಯಲ್ಲಿ ಅನೇಕ ತೆಂಗಿನಮರಗಳು ಉರುಳಿ ಬಿದ್ದು, ಅಪಾರ ಹಾನಿಯಾಗಿದೆ. ಅಲ್ಲದೆ ವಿದ್ಯುತ್ಕಂಬಗಳು ಉರುಳಿದ ಪರಿಣಾಮ ತಂತಿಗಳು ತುಂಡಾದ ಕಾರಣ ವಿದ್ಯುತ್ ಸರಬರಾಜಿನಲ್ಲಿ ತೊಂದರೆ ಉಂಟಾಗಿ, ಅನೇಕ ಹಳ್ಳಿಗಳು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.