ಉತ್ಸಾಹದಿಂದ ಮತ ಹಾಕಿದ ಮಹಿಳೆಯರು
ಕ.ಪ್ರ.ವಾರ್ತೆ ತುಮಕೂರು ಮೇ 5
ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಮಹಿಳೆಯರು ಅತ್ಯುತ್ಸಾಹದಿಂದ ಪಾಲ್ಗೊಂಡರು.
ಬೆಳಗ್ಗೆಯಿಂದ ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಕೆಲವು ಕಡೆ ಬೂತ್ ಏಜೆಂಟರಾಗಿ ಮಹಿಳೆಯರೇ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಮತಗಟ್ಟೆ ಕೇಂದ್ರದ ಹೊರಗೂ ಸಹ ಮಹಿಳೆಯರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷ.
ತುಮಕೂರು ನಗರದಲ್ಲಿ ಮಹಿಳೆಯರು ಮತ ಹಾಕಿದ ಪ್ರಮಾಣ ಹೆಚ್ಚಿದೆ. ಕೆಲ ಬೂತ್ಗಳಲ್ಲಿ 100 ಕ್ಕೂ ಹೆಚ್ಚು ಮಹಿಳೆಯರು ಸರತಿ ಸಾಲಿನಲ್ಲಿ ನಿಂತ ದೃಶ್ಯ ಸಾಮಾನ್ಯವಾಗಿತ್ತು. ನಜರಾಬಾದ್, ಹೆಗಡೆ ಕಾಲೋನಿ, ಗೋಕುಲ ಬಡಾವಣೆ ಸೇರಿ ಹಲವಾರು ಬಡಾವಣೆಗಳಲ್ಲಿ ಮಹಿಳೆಯರು ಮತದಾನ ಪ್ರಕ್ರಿಯೆಯಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದು ವಿಶೇಷವಾಗಿತ್ತು