ಎಎಂಎಂಎಂಟಿ ಅಂತಾರಾಷ್ಟ್ರೀಯ ಸಮ್ಮೇಳನ
ಕ.ಪ್ರ.ವಾರ್ತೆ ತುಮಕೂರು ಮೇ 5
ಇಲ್ಲಿನ ಎಸ್ಐಟಿ ಯಲ್ಲಿ ಎಎಂಎಂಎಂಟಿ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಪದ್ಮಶ್ರೀ ಡಾ. ಶಿವತನು ಪಿಳ್ಳೈ ಉದ್ಘಾಟಿಸಿದರು. ಅವರು ಮಾತನಾಡಿ ಸಂಶೋಧನೆ ಮೂಲಕ ನಮ್ಮ ದೇಶದಲ್ಲಿ ಹೊಸ ಹೊಸ ಪ್ರಯೋಗಗಳು ನಡೆದಿವೆ ಎಂದರು. ಕಾರ್ಯಕ್ರಮದಲ್ಲಿ ಡಾ. ರಾಮನಾರಾಯಣನ್, ಡಾ. ವಿ.ಎಸ್. ಮಲ್ಲಿಕಾರ್ಜುನ್, ಡಾ. ಕೆ.ವಿ. ಶ್ರೀನಿವಾಸ್ ರಾವ್ ಮಾತನಾಡಿದರು. ಡಾ.ಎಂ.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ. ಆರ್. ಸುರೇಶ್, ಪ್ರಾಂಶುಪಾಲ ಡಾ. ಶಿವಕುಮಾರಯ್ಯ ಉಪಸ್ಥಿತರಿದ್ದರು.