ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನ

Rashmi Kasaragodu
Updated On : 5 May 2013, 11:42 am

ತುಮಕೂರು: ಇಲ್ಲಿನ ಜಿಲ್ಲಾ ಕಸಾಪ ವತಿಯಿಂದ ಇದೇ ತಿಂಗಳ 7 ರಂದು ಬೆಳಗ್ಗೆ 10 ಗಂಟೆಗೆ ಸಿದ್ಧಗಂಗಾ ಡಿ.ಇಡಿ ಕಾಲೇಜಿನಲ್ಲಿ ಕಸಾಪ ಸಂಸ್ಥಾಪನಾ ದಿನ ಆಚರಿಸಲಾಗುವುದು. ಉದ್ಘಾಟನೆಯನ್ನು ಸಿ.ಎನ್. ಏಕೇಶ್ವರ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಿದ್ಧಗಂಗಯ್ಯ ಹೊಲತಾಳ್, ಎನ್. ನಾಗಪ್ಪ, ವಿದ್ವಾನ್ ಎಂ.ಜಿ. ಸಿದ್ದರಾಮಯ್ಯ,ಕೆಂ.ಬ. ರೇಣುಕಯ್ಯ ಆಗಮಿಸಲಿದ್ದಾರೆ. ನಂತರ ಜಿಲ್ಲಾ ಸೃಜನ ಸಾಹಿತ್ಯ ಕುರಿತ ಚರ್ಚೆ ನಡೆಯಲಿದೆ. ಇದರ ಉದ್ಘಾಟನೆಯನ್ನು ಸಿ.ಹೆಚ್. ಮರಿದೇವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಲಕ್ಷ್ಮಣದಾಸ್, ಡಾ. ಡಿ.ಎನ್. ಯೋಗೀಶ್ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಸೋಮು ಭಾಸ್ಕರಾಚಾರ್ ವಹಿಸಲಿದ್ದಾರೆ.
ಪಡುವಲಹಿಪ್ಪೆ: ಪತ್ನಿಯೊಂದಿಗೆ ಗೌಡರ ಮತದಾನ
ಹಾಸನ: ಇದೇ ಪ್ರಥಮ ಬಾರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮೊಮ್ಮಕ್ಕಳೊಂದಿಗೆ ಭಾನುವಾರ ಹೊಳೆನರಸೀಪುರ ತಾಲೂಕು ಪಡುವಲಹಿಪ್ಪೆ ಗ್ರಾಮದಲ್ಲಿ ಮತ ಚಲಾಯಿಸಿದರು. ಬೆಳಗ್ಗೆ 8.16 ಕ್ಕೆ ಮತಗಟ್ಟೆಗೆ ಆಗಮಿಸಿದ ಗೌಡರು, ಅಲ್ಲಿರುವ ಶ್ರೀರಾಮ ಮತ್ತು ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಮತಗಟ್ಟೆಗೆ ಆಗಮಿಸಿದರು. ಗೌಡರು ಪತ್ನಿ ಚನ್ನಮ್ಮ, ಎಚ್.ಡಿ. ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್, ಡಾ. ಸೂರಜ್ ಅವರೊಂದಿಗೆ ಬಂದು ಓಟು ಮಾಡಿದರು. ಇದೇ ಮೊದಲ ಬಾರಿಗೆ ರೇವಣ್ಣ ಪುತ್ರ ಮತದಾನ ಮಾಡಿದ್ದಲ್ಲದೇ, ಗೌಡರು ತಮ್ಮ ಮೊಮ್ಮಕ್ಕಳೊಂದಿಗೆ ಮತದಾನ ಮಾಡಿದರು.
ತಾಯಿ ಆಶೀರ್ವಾದ ಪಡೆದು ಮತದಾನ
ಚನ್ನರಾಯಪಟ್ಟಣ: ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ಪುಟ್ಟೇಗೌಡ ತಮ್ಮ ಸ್ವಗ್ರಾಮ ಚಾಮಡಿಹಳ್ಳಿಯಲ್ಲಿ ಸೋದರ ಮಾವಂದಿರು ಹಾಗೂ ತಾಯಿ ಬೋರಮ್ಮ ಅವರ ಕಾಲಿಗೆ ನಮಸ್ಕಾರ ಮಾಡಿದ ನಂತರ ಪತ್ನಿ ಶಿವಮ್ಮ ಹಾಗೂ ತಾಯಿಯೊಂದಿಗೆ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಿದರು. ಜೆಡಿಎಸ್ ಅಭ್ಯರ್ಥಿ ಸಿ.ಎನ್.ಬಾಲಕೃಷ್ಣ ತಮ್ಮ ಸ್ವಗ್ರಾಮ ಚೋಳೇನಹಳ್ಳಿಯಲ್ಲಿ ತಾಯಿ ಸೊಂಬಮ್ಮನವರ ಆಶಿರ್ವಾದ ಪಡೆದು ಅವರೊಂದಿಗೆ ಮತ ಚಲಾಯಿಸಿದರು. ಬಿಜೆಪಿ ಅಭ್ಯರ್ಥಿ ಮಂಜುನಾಥ್ ಪಟೇಲ್ ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿನ ಮತ ಕೇಂದ್ರದಲ್ಲಿ ಮತ ಚಲಾಯಿಸಿದರು. ನಾಗಸಮುದ್ರ ಹಾಗೂ ನವೋದಯ ಪದವಿ ಪೂರ್ವ ಕಾಲೇಜಿನಲ್ಲಿ ಮತಯಂತ್ರ ಕೈ ಕೊಟ್ಟ ಹಿನ್ನೆಲೆಯಲ್ಲಿ ತಕ್ಷಣವೇ ಅದನ್ನು ಬದಲಾಯಿಸಲಾಯಿತು ಎಂದು ಚುನಾವಣಾಧಿಕಾರಿ ಸುರೇಶ್ ತಿಳಿಸಿದ್ದಾರೆ.
ಕಾಂಗ್ರೆಸ್ - ಜೆಡಿಎಸ್ ಕಾರ್ಯಕರ್ತರ ಘರ್ಷಣೆ
ಅರಕಲಗೂಡು: ಇಲ್ಲಿನ ವಿಧಾನಸಭಾ ಕ್ಷೇತ್ರದ ಕೊಣನೂರು ಹೋಬಳಿ ಸರಗೂರು ಗ್ರಾಮದ ಮತಗಟ್ಟೆ ಬಳಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಎರಡೂ ಪಕ್ಷದ ಕಾರ್ಯಕರ್ತರಿಗೆ ಗಾಯಗಳಾಗಿವೆ. ಬೆಳಗಿನಿಂದ ಶಾಂತಿಯುತವಾಗೇ ನಡೆಯುತ್ತಿದ್ದ ಮತದಾನದಲ್ಲಿ ಸಂಜೆ  4.30ರ ವೇಳೆಗೆ ಮತಗಟ್ಟೆಯಲ್ಲಿದ್ದ ಕಾಂಗ್ರೆಸ್ ಮತಗಟ್ಟೆ ಏಜೆಂಟ್ ಕೃಷ್ಣ ಎಂಬುವವರು ಮೂತ್ರ ಮಾಡಲು ಹೊರಬಂದು ಹಿಂದಕ್ಕೆ ತೆರಳುವಾಗ ಜೆಡಿಎಸ್ ಮತಗಟ್ಟೆ ಏಜೆಂಟ್ ಮಹೇಶ್ ಪದೇ ಪದೇ ಏಕೆ ಹೊರಗೆ ಹೋಗಿ ಬರುತ್ತೀಯ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಕುಪಿತಗೊಂಡ ಕೃಷ್ಣ ಅದನ್ನು ಕೇಳಲು ನೀನ್ಯಾರು ಎಂದು ಪ್ರತಿಕ್ರಿಯಿಸಿದಾಗ ಮಾತಿಗೆ ಮಾತು ಬೆಳಿದು ಕೈ ಕೈ ಮಿಲಾಯಿಸಿದ್ದಾರೆ.ಈ ವೇಳೆ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು,ಇಬ್ಬರೂ ಗಾಯಾಳುಗಳು ಕೊಣನೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಂಡಸಿ: ಶೇ. 82 ಮತದಾನ
ಹಾಸನ: ಗಂಡಸಿ ಹೋಬಳಿಯಲ್ಲಿ ಶೇ.82ರಷ್ಟು ಮತದಾನ ಆಗಿದೆ. ಹೋಬಳಿಯಾದ್ಯಂತ ಶಾಂತಿ ಯುತವಾಗಿ ಮತದಾನವಾಗಿದ್ದು,ಯಾವುದೇ ಅಹಿತಕರ ಘಟನೆ ನಡೆದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement