ಮಧ್ಯಾಹ್ನದ ನಂತರ ಚುರುಕಾದ ಮತದಾನ
ಹುಳಿಯಾರು: ಚಿ.ನಾ.ಹಳ್ಳಿ ಕ್ಷೇತ್ರದ ವಿಧಾನಸಭಾ ಚುನಾವಣೆ ಭಾನುವಾರ ನಡೆದಿದ್ದು, ಹೋಬಳಿ ವ್ಯಾಪ್ತಿಯಲ್ಲಿ ಯಾವುದೇ ಘರ್ಷಣೆ, ಗದ್ದಲ ನಡೆಯದೆ ಶಾಂತಿಯುತವಾಗಿ ಮತದಾನ ನಡೆಯಿತು.
ಮುಂಜಾನೆ 7 ರಿಂದ ಆರಂಭವಾದ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮಧ್ಯಾಹ್ನದ ಉರಿ ಬಿಸಿಲು ಅರಿತು ಮತದಾರರು ಬೆಳಿಗ್ಗೆ ಮತದಾನ ಕೇಂದ್ರದ ಮುಂದೆ ನೀಂತಿದ್ದು ಕಂಡುಬಂತು. ಮಧಾಹ್ನ ಒಂದು ಗಂಟೆ ವೇಳೆಗೆ ಶೇ.50 ರಷ್ಟು ಮತದಾನವಾಗಿತ್ತು. ಉಳಿದಂತೆ ನೀರಸ ಮತದಾನ ನಡೆದು ಮತ್ತೆ ಸಂಜೆ ವೇಳೆಗೆ ಮತದಾರರು ಮತಕೇಂದ್ರಕ್ಕೆ ಬರಲಾರಂಭಿಸಿದ್ದು ಪುನಃ ಮತದಾನ ಚುರುಕುಗೊಂಡಿತು. ಪಟ್ಟಣದ ಕೆಲ ಮತಗಟ್ಟೆಗಳಲ್ಲಿ ಸರದಿಯಲ್ಲಿ ನಿಂತು ಜನ ಮತಚಲಾಯಿಸಿದೆ, ಇನ್ನುಳಿದ ಮತಗಟ್ಟೆಗಳಲ್ಲಿ ಜನ ವಿರಳವಾಗಿದ್ದು ಕಂಡುಬಂತು. ಹುಳಿಯಾರು ಪಟ್ಟಣದ 13 ವಾರ್ಡ್‌ಗಳಿಗೆ ಎಂಪಿಎಸ್ ಶಾಲೆ ಹಾಗೂ ಉರ್ದು ಶಾಲೆಯಲ್ಲಿ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಆಯೋಗವು ಮತದಾರರ ಗುರುತಿನ ಚೀಟಿಗಳನ್ನು ಮತದಾರರ ಮನೆಗಳಿಗೆ ತಲುಪಿಸಿರುವುದರಿಂದ ಮತದಾರರು ತಮ್ಮ ಮತಗಟ್ಟೆ ಕೇಂದ್ರಗಳನ್ನು ಹುಡುಕುವ ಗೊಂದಲವಿಲ್ಲದೆ ಮತಚಲಾಯಿಸಿದರು. ಬೆಳಿಗ್ಗೆ ಸುಡುಬಿಸಿಲಿನಲ್ಲಿ ಬಂದು ಜನ ಮತಚಲಾಯಿಸಿದರೆ, ಮಧಾಹ್ನ 2 ಗಂಟೆ ಸುಮಾರಿನಲ್ಲಿ ಸುರಿದ ತುಂತುರು ಮಳೆಯಲ್ಲಿ ಕೊಡೆ ಹಿಡಿದು ಬಂದು ಮತಚಲಾಯಿಸಲು ಮುಂದಾಗಿದ್ದರು.