ಹಾಸನ ಜಿಲ್ಲೆಯಲ್ಲಿ ಒಟ್ಟಾರೆ ಶೇ.77.05 ಹಕ್ಕು ಚಲಾವಣೆ
ಹಾಸನ: ಜಿಲ್ಲಾದ್ಯಂತ ಭಾನುವಾರ ನಡೆದ ಚುನಾವಣೆಯಲ್ಲಿ ಶೇ.73.20 ರಷ್ಟು ಮತದಾನವಾಗಿದ್ದು, ಕ್ಷೇತ್ರದಲ್ಲಿ ಹೆಚ್ಚು ಮತದಾನವಾಗಿದೆ. ಹಾಸನ ಕ್ಷೇತ್ರದಲ್ಲಿ 1,22,864 ಮತದಾನವಾಗುವ ಮೂಲಕ ಶೇ.67 ರಷ್ಟಾಗಿದೆ. ಅರಕಲಗೂಡಿನಲ್ಲಿ 1,73,785 ಮತದಾನವಾಗಿದ್ದು ಶೇ.87.85ರಷ್ಟು ಮತದಾನವಾಗಿದೆ. ಹೊಳೆನರಸೀಪುರದಲ್ಲಿ 1,38,840 ಮತ ಚಲಾವಣೆಗೊಂಡು ಶೇ.70.52ರಷ್ಟು ಮತದಾನವಾಗಿದೆ. ಶ್ರವಣಬೆಳಗೊಳದಲ್ಲಿ ಶೇ.80.20, ಸಕಲೇಶಪುರದಲ್ಲಿ ಶೇ.73ರಷ್ಟು ಮತದಾನವಾಗಿದೆ. ಬೇಲೂರಿನಲ್ಲಿ 1,31,325 ಮತದಾನವಾಗಿದ್ದು ಶೇ.75 ರಷ್ಟ ಮತದಾನವಾಗಿದೆ.