ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

10 ರಂದು ಸಂಸ್ಕೃತಿ ಸುಧಾ

Rashmi Kasaragodu
Updated On : 7 May 2013, 12:02 pm

ತುಮಕೂರು: ಇಲ್ಲಿನ ಡಾ. ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ಮೇ 10 ರಂದು ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನೋತ್ಸವ ವರ್ಷಾಚರಣೆ ಅಂಗವಾಗಿ ಕೃಪಾಮಯಿ ಮಕ್ಕಳ ಬಳಗದಿಂದ ಸಂಸ್ಕೃತಿ ಸುಧಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾನಿಧ್ಯ ಮತ್ತು ಆಶೀರ್ವಚನವನ್ನು ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ನೀಡಲಿದ್ದಾರೆ. ಉದ್ಘಾಟನೆ ಬಿ.ಆರ್. ನಟರಾಜ ಶೆಟ್ಟಿ ನೆರವೇರಿಸುವರು. ಕಿಶೋರ ಸೌರಭ ವಾರ್ಷಿಕ ಪತ್ರಿಕೆಯನ್ನು ಏ.ಕೆ. ಬಸವರಾಜಪ್ಪ ಬಿಡುಗಡೆಗೊಳಿಸುವರು. ವಿಶೇಷ ಆಹ್ವಾನಿತರಾಗಿ ಉಷಾ ಅನಂತರಾಮಯ್ಯ, ಅನಂತರಾಮಯ್ಯ ಆಗಮಿಸಲಿದ್ದಾರೆ.
ಇಂದು ಮಾತುಕತೆ
ಇಲ್ಲಿನ ದೇಸಿ ಬಳಗದ ವತಿಯಿಂದ ಇದೇ ತಿಂಗಳ 7 ರಂದು ಸಂಜೆ 6 ರಿಂದ 8 ರವರೆಗೆ ತುಮಕೂರು ಜಿಲ್ಲೆಯ ಅಭಿವೃದ್ಧಿ ಆಯಾಮಗಳು ಕುರಿತ ಮಾತುಕತೆ ಆಯೋಜಿಸಲಾಗಿದೆ. ಸಿ. ಯತಿರಾಜು ವಿಷಯ ಮಂಡಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೆ. ದೊರೈರಾಜು ವಹಿಸಲಿದ್ದಾರೆ.
ಕೆಜೆಪಿ ಅಭಿನಂದನೆ
ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಪಕ್ಷವನ್ನು ಬೆಂಬಲಿಸಿ ಮತದಾರರಿಗೂ, ಕಾರ್ಯಕರ್ತರಿಗೂ ಮತ್ತು ಎಲ್ಲಾ ನಾಗರಿಕರಿಗೆ ಕೆಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ್ ಧನ್ಯವಾದ ಅರ್ಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement