ಜರ್ಮನಿಗೆ ಪ್ರಾಣಿಗಳ ವಿನಿಮಯ
ಮೈಸೂರು: ಪ್ರಾಣಿ ವಿನಿಮಯ ಯೋಜನೆಯಡಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯವು 4 ಕರಡಿಗಳನ್ನು ಜರ್ಮನಿಯ ಲೆಪ್ಜಿಗ್ ಮೃಗಾಲಯಕ್ಕೆ ಕಳುಹಿಸಿದೆ.
ಪ್ರಾಣಿ ವಿನಿಮಯ ಯೋಜನೆಯಡಿ 2 ಗಂಡು ಮತ್ತು 2 ಹೆಣ್ಣು ಕರಡಿಗಳನ್ನು ಕಳುಹಿಸಲಾಗಿದೆ. ಇದಕ್ಕೆ ಪ್ರತಿಯಾಗಿ ನಾಲ್ಕು ಬೇಟೆ ಚಿರತೆಗಳು ಮೈಸೂರು ಮೃಗಾಲಯಕ್ಕೆ ಕಳೆದ ಮಾರ್ಚ್ ತಿಂಗಳಲ್ಲಿಯೆ ಬಂದಿದೆ. ಪುಣೆಯಿಂದ ತಂದ 4 ವರ್ಷದ ಸುಭೋದ್, ಪಣಜಿಯಿಂದ ತಂದ 2 ವರ್ಷದ ರಜತ್ ಮತ್ತು ರಚನ ಹಾಗೂ ಮೈಸೂರು ಮೃಗಾಲಯದಲ್ಲಿಯೆ ಇದ್ದ 4 ವರ್ಷದ ಕಾವೇರಿ ಎಂಬ ಕರಡಿ ಕಳುಹಿಸಲಾಗಿದೆ.