ಜಿಲ್ಲೆಯಲ್ಲಿ ಒಟ್ಟು ಶೇ.79.34 ಮತದಾನ
ಕ.ಪ್ರ. ವಾರ್ತೆ ತುಮಕೂರು ಮೇ 6
ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದ ಒಟ್ಟು 20,22,220 ಮತದಾರರ ಪೈಕಿ 16,04,330 ಮತದಾರರು ತಮ್ಮ ಮತ ಚಲಾಯಿಸಿದ್ದು, ಜಿಲ್ಲೆಯಲ್ಲಿ ಒಟ್ಟು ಶೇ.79.34ರಷ್ಟು ಮತದಾನವಾಗಿದೆ.
ಜಿಲ್ಲೆಯಾದ್ಯಂತ ಪುರುಷ ಮತದಾರರು 1023134, ಮಹಿಳಾ ಮತದಾರರ 998995, ಇತರೆ 91, ಒಟ್ಟು 20,22,220 ಮತದಾರರಿದ್ದು, ಇವರ ಪೈಕಿ ಪುರುಷ 823007 (ಶೇ. 80.44), ಮಹಿಳೆಯರು 781322 (ಶೇ.78.21) ಸೇರಿದಂತೆ ಒಟ್ಟು 1604330 ಮತ ಚಲಾವಣೆಗೊಂಡಿದ್ದು, ಒಟ್ಟು ಶೇ.79.34 ಮತದಾನವಾಗಿದೆ.
ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ ಮತದಾರರು 100161, ಮಹಿಳಾ ಮತದಾರರು 98237, ಒಟ್ಟು 1,98,398 ಮತದಾರರಿದ್ದು, ಇವರ ಪೈಕಿ ಪುರುಷ 81880 (ಶೇ. 81.75), ಮಹಿಳೆಯರು 78161 (ಶೇ.79.56) ಸೇರಿದಂತೆ ಒಟ್ಟು 160041 ಮತ ಚಲಾವಣೆಗೊಂಡಿದ್ದು, ಒಟ್ಟು ಶೇ.80.67 ಮತದಾನವಾಗಿದೆ.
ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 171491 ಮತದಾರರಿದ್ದು, ಇವರ ಪೈಕಿ ಪುರುಷ 70559 (ಶೇ. 83.08), ಮಹಿಳೆಯರು 68779 (ಶೇ.79.46) ಸೇರಿದಂತೆ ಒಟ್ಟು 139338 ಮತ ಚಲಾವಣೆಗೊಂಡಿದ್ದು, ಒಟ್ಟು ಶೇ.81.25 ಮತದಾನವಾಗಿದೆ. ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 175949 ಮತದಾರರಿದ್ದು, ಇವರ ಪೈಕಿ ಪುರುಷ 70620 (ಶೇ. 80.30), ಮಹಿಳೆಯರು 68937 (ಶೇ.78.33) ಸೇರಿದಂತೆ ಒಟ್ಟು 139557 ಮತ ಚಲಾವಣೆಗೊಂಡಿದ್ದು, ಒಟ್ಟು ಶೇ.79.32 ಮತದಾನವಾಗಿದೆ.
ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 170754 ಮತದಾರರಿದ್ದು, ಇವರ ಪೈಕಿ ಪುರುಷ 72270 (ಶೇ.83.78), ಮಹಿಳೆಯರು 69699 (ಶೇ.82.50), ಇತರೆ 1 ಸೇರಿದಂತೆ ಒಟ್ಟು 141970 ಮತ ಚಲಾವಣೆಗೊಂಡಿದ್ದು, ಒಟ್ಟು ಶೇ.83.14 ಮತದಾನವಾಗಿದೆ.
ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 210396 ಮತದಾರರಿದ್ದು, ಇವರ ಪೈಕಿ ಪುರುಷ 69736 (ಶೇ. 66.04), ಮಹಿಳೆಯರು 66993 (ಶೇ.63.94) ಸೇರಿದಂತೆ ಒಟ್ಟು 136729 ಮತ ಚಲಾವಣೆಗೊಂಡಿದ್ದು, ಒಟ್ಟು ಶೇ.64.99 ಮತದಾನವಾಗಿದೆ. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 175358 ಮತದಾರರಿದ್ದು, ಇವರ ಪೈಕಿ ಪುರುಷ 75596 (ಶೇ. 84.88), ಮಹಿಳೆಯರು 70503 (ಶೇ.81.70) ಸೇರಿದಂತೆ ಒಟ್ಟು 146098 ಮತ ಚಲಾವಣೆಗೊಂಡಿದ್ದು, ಒಟ್ಟು ಶೇ.83.31 ಮತದಾನವಾಗಿದೆ.
ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 181868 ಮತದಾರರಿದ್ದು, ಇವರ ಪೈಕಿ ಪುರುಷ 78378 (ಶೇ. 84.46), ಮಹಿಳೆಯರು 73361 (ಶೇ.82.38) ಸೇರಿದಂತೆ ಒಟ್ಟು 151739 ಮತ ಚಲಾವಣೆಗೊಂಡಿದ್ದು, ಒಟ್ಟು ಶೇ.83.43 ಮತದಾನವಾಗಿದೆ. ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 167900 ಮತದಾರರಿದ್ದು, ಇವರ ಪೈಕಿ ಪುರುಷ 71688 (ಶೇ. 84.06), ಮಹಿಳೆಯರು 67353 (ಶೇ.81.53) ಸೇರಿದಂತೆ ಒಟ್ಟು 139041 ಮತ ಚಲಾವಣೆಗೊಂಡಿದ್ದು, ಒಟ್ಟು ಶೇ.82.81 ಮತದಾನವಾಗಿದೆ.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 201495 ಮತದಾರರಿದ್ದು, ಇವರ ಪೈಕಿ ಪುರುಷ 82113 (ಶೇ. 79.82), ಮಹಿಳೆಯರು 76695 (ಶೇ.77.77) ಸೇರಿದಂತೆ ಒಟ್ಟು 158808 ಮತ ಚಲಾವಣೆಗೊಂಡಿದ್ದು, ಒಟ್ಟು ಶೇ.78.81 ಮತದಾನವಾಗಿದೆ. ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 186121 ಮತದಾರರಿದ್ದು, ಇವರ ಪೈಕಿ ಪುರುಷ 74706 (ಶೇ. 78.50), ಮಹಿಳೆಯರು 69971 (ಶೇ.76.93) ಸೇರಿದಂತೆ ಒಟ್ಟು 144677 ಮತ ಚಲಾವಣೆಗೊಂಡಿದ್ದು, ಒಟ್ಟು ಶೇ.77.73 ಮತದಾನವಾಗಿದೆ.
ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 182490 ಮತದಾರರಿದ್ದು, ಇವರ ಪೈಕಿ ಪುರುಷ 75461 (ಶೇ.81.07), ಮಹಿಳೆಯರು 70871 (ಶೇ.79.27) ಸೇರಿದಂತೆ ಒಟ್ಟು 146332 ಮತ ಚಲಾವಣೆಗೊಂಡಿದ್ದು, ಒಟ್ಟು ಶೇ.80.19 ಮತದಾನವಾಗಿದೆ.