ನಕಲು ಮತಕ್ಕೆ ಯತ್ನ: ಬಂಧನ
ಅರಕಲಗೂಡು: ನಿವೃತ್ತ ಮಿಲಿಟರಿ ನೌಕರನೊಬ್ಬ ನಕಲಿ ಮತದಾನಕ್ಕೆ ಪ್ರಯತ್ನಿಸಿ ಮತಗಟ್ಟೆ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಘಟನೆ ನಡೆದಿದೆ. ತಾಲೂಕಿನ ದೊಡ್ಡಗಾವನಹಳ್ಳಿ ಗ್ರಾಮದ ಅಣ್ಣಾಜಿ ಎಂಬಾತ ಸಿಕ್ಕಿಬಿದ್ದವರು. ಈತ ಅರಕಲಗೂಡಿನಲ್ಲಿ ಮೊದಲು ಮತದಾನ ಮಾಡಿ ನಂತರ ದೊಡ್ಡಗಾವನಹಳ್ಳಿ ಗ್ರಾಮದಲ್ಲಿ ಮತ ಚಲಾಯಿಸಲು ಮತಗಟ್ಟೆಗೆ ತೆರಳಿದ್ದ ಎನ್ನಲಾಗಿದೆ. ಈ ಸಂಬಂಧ ಅರಕಲಗೂಡು ಪೊಲೀಸರು ಆರೋಪಿಯನ್ನು ಬಂಧಿಸಿ,ಪ್ರಕರಣ ದಾಖಲಿಸಿದ್ದಾರೆ.