ಪಾವಗಡ: ಶೇ.73.76 ಮತದಾನ
ಪಾವಗಡ: ಚುನಾವಣೆಲ್ಲಿ ಶಾಂತ ರೀತಿಯಲ್ಲಿ ಶೇ.73.76 ಮತದಾನವಾಗಿದೆ. ಬೆಳಿಗ್ಗೆ 7ಗಂಟೆಯಿಂದಲೇ ಮತದಾನ ಪ್ರಾರಂಭವಾಗಿ ಆರಂಭದಲ್ಲಿ ಮಂದಗತಿಯಲ್ಲಿ ಮತದಾನ ನಡೆದು 11ಗಂಟೆ ಆಗುತ್ತಿದ್ದಂತೆ ಮತದಾನದ ಬಿಸಿ ತಾಲೂಕಿನಾದ್ಯಂತ ಬಿರಿಸಿನಿಂದ ಸಾಗಿತು. ಸಂಜೆ 4.30ಕ್ಕೆ ಮಿಂಚು, ಗುಡುಗು ಮಳೆ ಗಾಳಿ ಏಕ ಕಾಲದಲ್ಲಿ ಆರಂಭವಾದ ಪ್ರಯುಕ್ತ ಪಾವಗಡ ಪಟ್ಟಣ ಸೇರಿದಂತೆ ಕಸಬಾ ವ್ಯಾಪ್ತಿಯ ಸುತ್ತಮುತ್ತ ಹಳ್ಳಿಗಳು ಹಾಗೂ ನಿಡಗಲ್ ವ್ಯಾಪ್ತಿಯ ಗುಜ್ಜನಡು, ದವಟಬೆಟ್ಟ, ಬ್ಯಾಡನೂರು, ಕನ್ನಮೇಡಿ ಅರಸೀಕೆರೆ ಸಿ.ಕೆ.ಪುರ ದೇವಲಕೆರೆ, ಮುಗಾದಳಬೆಟ್ಟ ಮುಂತಾದ ಗ್ರಾಮಗಳಲ್ಲಿ ಕೊನೆ ಗಳಿಗೆಯಲ್ಲಿ ಮತದಾನ ವಿಫಲವಾಯಿತು. ತಾಲೂಕಿನಲ್ಲಿ ಪುರುಷರು 95,157,ಹಾಗೂ ಮಹಿಳೆಯರು 90,964 ಮತದಾರರಿದ್ದಾರೆ. ಒಟ್ಟು 1,86,121ಮತದಾರರಿದ್ದು,ಈ ಪೈಕಿ 74,706 ಪುರುಷರು, ಹಾಗೂ 69,971 ಮಹಿಳೆಯರು ಸೇರಿದಂತೆ ಒಟ್ಟು 1,44,672 ಮಂದಿ ಮತದಾನ ಮಾಡಿದ್ದಾರೆ. ತಾಲೂಕಿನ ಎಲ್ಲಾ ಕಡೆ ಬೀಗಿ ಪೊಲೀಸ್ ಬಂದೋಬಸ್ತು ಇದ್ದ ಕಾರಣ ಅಹಿತರ ಘಟನೆಗಳಿಗೆ ಅವಕಾಶವಿಲ್ಲದೆ ಶಾಂತಿ ರೀತಿಯ ಮತದಾನ ನಡೆಯಿತು.