ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಾಹನ ಡಿಕ್ಕಿ: ದ್ವಿಚಕ್ರ ವಾಹನ ಸವಾರ ಸಾವು

Rashmi Kasaragodu
Updated On : 7 May 2013, 12:01 pm

ಗುಬ್ಬಿ: ಅಪರಿಚಿತ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಪತ್ರೆ ಮತ್ತಿಘಟ್ಟ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿ ತಾಲೂಕಿನ ಚೇಳೂರಿನ ಗಂಗಾಧರಯ್ಯ (48) ಎಂದು ತಿಳಿದು ಬಂದಿದೆ. ಈತ ಹೊಸದುರ್ಗದಲ್ಲಿ ಸರ್ವೆಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಚುನಾವಣಾ ಕರ್ತವ್ಯ ಮುಗಿಸಿಕೊಂಡು ತುಮಕೂರಿಗೆ ಹಿಂದಿರುಗುತ್ತಿದ್ದಾಗ ಮಾರ್ಗ ಮಧ್ಯೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಗುಬ್ಬಿ ಸಿಎಸ್ಐ ಮಾರ್ಕಾಂಡಯ್ಯ ಸ್ಥಳಕ್ಕೆ ಭೇಟಿ ನೀಡಿ   ಪ್ರಕರಣ ದಾಖಲಿಸಿದ್ದಾರೆ.


ವಿ.ಜಿ. ಶ್ವೇತಾ ಉತ್ತಮ ಸಾಧನೆ
ಪಾವಗಡ: 2012-13ನೇ ಸಾಲಿನಲ್ಲಿ ತುಮಕೂರು ನಗರದ ಸೇಂಟ್ ಮೇರಿಸ್ ಸ್ಕೂಲ್ನಲ್ಲಿ ವ್ಯಾಸಂಗ ಮಾಡುತ್ತಿರುವ ಪಾವಗಡ ತಾ.ವಿರಪಸಮುದ್ರ ಗ್ರಾಮದ ಶಿಕ್ಷಕ ಗಂಗಯ್ಯ ಅವರ ಪುತ್ರಿ ವಿ.ಜಿ.ಶ್ವೇತಾ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 88.4ರಷ್ಟು (553)ಅಂಕ ಗಳಿಸಿ  ಉತ್ತಿರ್ಣರಾಗಿರುತ್ತಾರೆ. ಇವರನ್ನು ಡಿ.ಗಂಗಾಧರಪ್ಪ, ಲಕ್ಷ್ಮೀ ನರಸಪ್ಪ, ರಾಮಾಂಜಿನಪ್ಪ ಎ.ರವಿ, ಎನ್.ನಾಗರಾಜು ಲಕ್ಷ್ಮಣ್ಕುಮಾರ್ ಮುಂತಾದವರು ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement