ಸಿಂಡಿಕೇಟ್ ನಿರ್ಣಯ ವಿರುದ್ಧ ಪಿಐಎಲ್
ಮೈಸೂರು: ಮೈಸೂರು ವಿವಿಯ ಸಿಂಡಿಕೇಟ್ ಸಭೆಯು ಇತ್ತೀಚೆಗೆ ಕೈಗೊಂಡ ನಿರ್ಣಯದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗುವುದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಂ ತಿಳಿಸಿದರು. ಏ. 24 ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಮೈಸೂರು ವಿವಿ ಕುಲಪತಿ ಪ್ರೊ. ಕೆ. ಎಸ್. ರಂಗಪ್ಪ ಅವರ ಪುತ್ರ ಆರ್. ಶೋಭಿತ್ ಅವರ ಪ್ರವೇಶಾತಿ ಅಕ್ರಮದ ಪ್ರಕರಣ ಮುಚ್ಚಿ ಹಾಕಿರುವುದು ಮತ್ತೊಂದು ವಂಚನೆಯಾಗಿದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.