ಸೋಲು ಗೆಲವಿಗೆ ವ್ಯಾಪಕ ಬೆಟ್ಟಿಂಗ್
ತಿಪಟೂರು: ತಾಲೂಕಿನಾದ್ಯಂತ ಬೆಟ್ಟಿಂಗ್ ದಂಧೆ ಬಲುಜೋರಾಗಿದ್ದು, ದಂಧೆಕೋರರ ಮೊಬೈಲ್ಗಳಿಗೆ ಪುರುಸೊತ್ತಿಲ್ಲದೆ ರಿಂಗುಣಿಸುತ್ತಿವೆ. ಪ್ರಮುಖ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರು ನಮ್ಮದೇ ಪಕ್ಷ ಗೆಲವು ಸಾಧಿಸಲಿದೆ ಎಂದು ಹಾದಿ ಬೀದಿ, ಬಸ್ ನಿಲ್ದಾಣ ಮತ್ತು ಹೋಟೆಲ್ಗಳಲ್ಲಿ ಬೂತ್ ಮಟ್ಟದ ಶೇಕಡಾವಾರು ಲೀಡಿಂಗ್ ಮತ್ತು ಸೋಲು ಗೆಲವುಗಳ ಬಗ್ಗೆ ಬಿಸಿ ಬಿಸಿ ಚರ್ಚೆ, ಬೆಟ್ಟಿಂಗ್ ದಂಧೆ ವ್ಯಾಪಕವಾಗಿ ನಡೆಯುತ್ತಿವೆ. ಬೆಟ್ಟಿಂಗ್ ದಂಧೆ 10ಸಾವಿರದಿಂದ ಲಕ್ಷಾಂತರ ರೂಪಾಯಿಗಳವರೆಗೆ ನಡೆಯುತ್ತಿರುವುದು ಕುತೂಹಲ ಕೆರಳಿಸಿದೆ.