10 ರಂದು ಸರ್ಕಾರಿ ನಿವೃತ್ತ ನೌಕರರ ಮಾಸಿಕ ಸಭೆ
ಶಿರಾ: ತಾಲೂಕು ಸರ್ಕಾರಿ ನಿವೃತ್ತ ನೌಕರರ ಮಾಸಿಕ ಸಭೆಯನ್ನು ಮೇ 10 ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಪಟ್ಟನಾಯಕನಹಳ್ಳಿಯ ಗ್ರಾಮದ ನಿವೃತ್ತ ಆರೋಗ್ಯ ಸಹಾಯಕ ಎಂ.ನಾಗಯ್ಯ ಅವರ ತೋಟದ ಮನೆಯಲ್ಲಿ ನಡೆಸಲು ವ್ಯವಸ್ಥೆ ಮಾಡಲಾಗಿದೆ. ತಾಲೂಕಿನ ಎಲ್ಲಾ ನೌಕರರು ಸಭೆಗೆ ಹಾಜರಾಗಿ ತಮ್ಮ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಬೇಕೆಂದು ಸಂಘದ ಉಪಾಧ್ಯಕ್ಷ ಮಲ್ಲಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.