ಎಸ್ಎಸ್ಎಲ್ಸಿಯಲ್ಲಿ ಶೇ.88.50 ಫಲಿತಾಂಶ
ಕ.ಪ್ರ.ವಾರ್ತೆ, ಕುಣಿಗಲ್ಣ್ ಮೇ 7
ಪ್ರಸಕ್ತ ಎಸ್ಎಸ್ಎಲ್ಸಿ ಪರೀಕ್ಷೆಗೆ ತಾಲೂಕಿನಾದ್ಯಂತ 3145 ವಿದ್ಯಾರ್ಥಿಗಳು ಹಾಜರಾಗಿ 2676 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ, ಒಟ್ಟಾರೆ ಶೇ.88.50ರಷ್ಟು ಫಲಿತಾಂಶ ಪಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಜಿ.ಲೋಕೇಶ್ ತಿಳಿಸಿದರು.
ಸರ್ಕಾರಿ ಪ್ರೌಢಶಾಲೆಯ 1607 ವಿದ್ಯಾರ್ಥಿಗಳ ಪೈಕಿ 1384 ವಿದ್ಯಾರ್ಥಿಗಳು ಪಾಸಾಗುವ ಮೂಲಕ ಶೇ.89.50 ಫಲಿತಾಂಶ ಗಳಿಸಿದ್ದಾರೆ. ಅನುದಾನಿತ ಶಾಲೆಗಳ 974 ವಿದ್ಯಾರ್ಥಿಗಳ ಪೈಕಿ 783 ವಿದ್ಯಾರ್ಥಿಗಳು ಪಾಸಾಗಿ, ಶೇ.79 ಫಲಿತಾಂಶ ಗಳಿಸಿದ್ದರೆ, ಖಾಸಗಿ ಅನುದಾನ ರಹಿತ ಶಾಲೆಗಳ 554 ವಿದ್ಯಾರ್ಥಿಗಳ ಪೈಕಿ 509 ವಿದ್ಯಾರ್ಥಿಗಳು ಪಾಸಾಗಿ ಶೇ.91.88 ಫಲಿತಾಂಶ ಗಳಿಸಿದೆ. 32 ಸರ್ಕಾರಿ ಪ್ರೌಢಶಾಲೆಗಳ ಪೈಕಿ, ನಿಡಸಾಲೆ, ತಾವರೆಕೆರೆ, ಎಲೆಕಡಕಲು ಮಾಗಡಿಪಾಳ್ಯ, ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಮಲ್ಲನಾಯಕನಹಳ್ಳಿ, ಅಂಕನಹಳ್ಳಿಯ ಮೊರಾರ್ಜಿ ವಸತಿ ಶಾಲೆ ಸೇರಿದಂತೆ ಆರು ಸರ್ಕಾರಿ ಶಾಲೆಗಳಲ್ಲಿ ಶೇಕಡಾ ನೂರರಷ್ಟು ಫಲಿತಾಂಶ ಪಡೆದಿದ್ದರೆ, 24 ಅನುದಾನಿತ ಪ್ರೌಢಶಾಲೆಗಳ ಪೈಕಿ ಯಡೆಯೂರು ಸಿದ್ದಲಿಂಗೇಶ್ವರ ಸಂಯುಕ್ತ ಪ.ಪೂ.ಕಾಲೇಜಿನ ಪ್ರೌಢಶಾಲೆ, ಗೌತಮ ಪ್ರೌಢಶಾಲೆ ಶೇಕಡಾ ನೂರಕ್ಕೆ ನೂರು ಫಲಿತಾಂಶ ಪಡೆದಿದ್ದು, ಖಾಸಗಿ ಅನುದಾನಿತ ಆರು ಪ್ರೌಢಶಾಲೆಗಳ ಪೈಕಿ ಗೊಟ್ಟಿಕೆರೆಯ ಕುಣಿಗಲ್ ವ್ಯಾಲಿ ಇಂಟರ್ನ್ಯಾಷನಲ್ ಸ್ಕೂಲ್, ಪಟ್ಟಣದ ಸ್ಟೆಲ್ಲಾ ಮೇರೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಹುಲಿಯೂರುದುರ್ಗದ ಜ್ಞಾನಭಾರತಿ ಪ್ರೌಢಶಾಲೆ ಶೇಕಡಾ ನೂರಕ್ಕೆ ನೂರು ಫಲಿತಾಂಶ ಗಳಿಸಿವೆ.
ದರ್ಶಿನಿ ಪ್ರಥಮ: ಕುಣಿಗಲ್ ವ್ಯಾಲಿ ಶಾಲೆಯ ದರ್ಶಿನಿ ಕೆ.ಎಚ್.595 (ಶೇ.95.2) ಅಂಕ ಗಳಿಸುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನದಲ್ಲಿದ್ದರೆ, ದ್ವಿತೀಯ ಸ್ಥಾನದಲ್ಲಿ ಪಟ್ಟಣದ ಜ್ಞಾನಭಾರತಿ ಪ್ರೌಢಶಾಲೆಯ ವಿದ್ಯಾರ್ಥಿನಿ ದರ್ಶಿನಿ ಸಿ.ಆರ್. 594, ಸಿಂಧು ಸಿ. 594 ಪಡೆಯುವ ಮೂಲಕ ದ್ವಿತೀಯ ಸ್ಥಾನದಲ್ಲಿದ್ದರೆ, ಸ್ಟೆಲ್ಲಾ ಮೇರಿಸ್ ಆಂಗ್ಲಪ್ರೌಢಶಾಲೆಯ ಮಹಿಮಾ ಎಚ್ಎಸ್.584 ಅಂಕಗಳಿಸುವ ಮೂಲಕ ತಾಲೂಕಿಗೆ ತೃತೀಯ ಸ್ಥಾನದಲ್ಲಿದ್ದಾರೆ. ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳ ಪೈಕಿ 22 ಅತ್ಯುನ್ನತ ಶ್ರೇಣಿ, 483 ಪ್ರಥಮ ಶ್ರೇಣಿ, 334 ದ್ವಿತೀಯ ಶ್ರೇಣಿ ಹಾಗೂ 545 ಸಾಮಾನ್ಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಅನುದಾನಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳ ಪೈಕಿ 13 ಅತ್ಯುನ್ನತ ಶ್ರೇಣಿ, 270 ಪ್ರಥಮ ಶ್ರೇಣಿ, 271 ದ್ವಿತೀಯ ಶ್ರೇಣಿ ಹಾಗೂ 467 ಸಾಮಾನ್ಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಖಾಸಗಿ ಅನುದಾನ ರಹಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳ ಪೈಕಿ 42 ಅತ್ಯುನ್ನತಶ್ರೇಣಿ, 171 ಪ್ರಥಮ ಶ್ರೇಣಿ, 42 ದ್ವಿತೀಯ ಶ್ರೇಣಿ ಹಾಗೂ 14 ಸಾಮಾನ್ಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ವಿದ್ಯಾರ್ಥಿಗಳ ಪೈಕಿ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗುವ ಮೂಲಕ ಮೇಲುಗೈ ಸಾಧಿಸಿದ್ದರೆ, ತಾಲೂಕಿನ ಒಟ್ಟಾರೆ ಫಲಿತಾಂಶ ಕಳೆದ ಬಾರಿ ಶೇ.82ರಷ್ಟಿದ್ದು ಈ ಬಾರಿ ಶೇ.88.50ಗೇರಿದರೊ ಜಿಲ್ಲೆಯಲ್ಲಿ ತಾಲೂಕು 4ನೇ ಸ್ಥಾನಕ್ಕಿಳಿದಿದೆ.(ಕಳೆದಬಾರಿ 2ನೇ ಸ್ಥಾನದಲ್ಲಿತ್ತು). ಯಲಗಲವಾಡಿ ಸರ್ಕಾರಿ ಪ್ರೌಢಶಾಲೆ ಶೇ.55ರಷ್ಟು ಅತಿ ಕಡಿಮೆ ಫಲಿತಾಂಶ ಪಡೆದ ಶಾಲೆಯಾಗಿದೆ.