ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜ್ಞಾನಭಾರತಿ ಕಾಲೇಜಿಗೆ ಶೇ.92.10 ಫಲಿತಾಂಶ

Rashmi Kasaragodu
Updated On : 8 May 2013, 12:05 pm

ಕುಣಿಗಲ್: ಪಟ್ಟಣದ ಜ್ಞಾನಭಾರತಿ ವಿಜ್ಞಾನ ಪ.ಪೂ.ಕಾಲೇಜು ಪ್ರಸಕ್ತ ಸಾಲಿನ ಪಿಯು ಪರೀಕ್ಷೆಯಲ್ಲಿ ಶೇ.92.10 ಫಲಿತಾಂಶ ಗಳಿಸಿದ್ದು, 38 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 35 ವಿದ್ಯಾರ್ಥಿಗಳು ಉತ್ತೀರ್ಣರಾಗಿ, 03 ಅತ್ಯುನ್ನತ ಶ್ರೇಣಿ, 13 ಪ್ರಥಮ ಶ್ರೇಣಿ, 11 ದ್ವಿತೀಯ ಶ್ರೇಣಿ, ಮೂವರು ಸಾಮಾನ್ಯ ಶ್ರೇಣಿಯಲ್ಲಿ ಪಾಸಾಗಿದ್ದು ಮೂವರು ಅನುತ್ತೀರ್ಣರಾಗಿದ್ದಾರೆ. ವಿಶ್ವೇಶ್ ಪ್ರಭು 556 ಅಂಕ ಪಡೆದು ತಾಲೂಕಿಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಮಹಾತ್ಮಗಾಂಧಿ ಪ.ಪೂ.ಕಾಲೇಜಿನ ಒಟ್ಟಾರೆ ಫಲಿತಾಂಶ ಶೇ.80 ರಷ್ಟಿದ್ದು, ಕಲಾವಿಭಾಗದಲ್ಲಿ 100 ಮಂದಿ ಪರೀಕ್ಷೆ ಎದುರಿಸಿ 83 ಮಂದಿ ಪಾಸಾಗಿದ್ದರೆ, ವಾಣಿಜ್ಯವಿಭಾಗದಲ್ಲಿ 268ಕ್ಕೆ 263, ವಿಜ್ಞಾನ ವಿಭಾಗದಲ್ಲಿ 91ಕ್ಕೆ 41 ಮಂದಿ ಉತ್ತೀರ್ಣರಾಗಿದ್ದು, ವಿಜ್ಞಾನ ವಿಭಾಗದಲ್ಲಿ ಪ್ರಶಾಂತ್ ಕುಮಾರ್ 560 ಅಂಕಗಳಿಸುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಹಾಸ್ಟೆಲ್ಗೆ
ಅರ್ಜಿ ಆಹ್ವಾನ
ತಿಪಟೂರು: ತಾಲೂಕು ಸಮಾಜ ಕಲ್ಯಾಣ ಇಲಾಖಾ ವತಿಯಿಂದ ನಡೆಯುತ್ತಿರುವ ಬಾಲಕ ಮತ್ತು ಬಾಲಕಿಯರ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಿಗೆ 2013-14ನೇ ಸಾಲಿನಲ್ಲಿ ಸೇರ ಬಯಸುವ ಪರಿಶಿಷ್ಟ ಜಾತಿ,ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳ 5ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಜೂನ್ 5 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.  ಅರ್ಜಿಯೊಂದಿಗೆ ಪರಿಶಿಷ್ಟು ಜಾತಿ, ವರ್ಗದ ವಿದ್ಯಾರ್ಥಿಗಳು ತಹಸೀಲ್ದಾರ್ ಅವರಿಂದ ಜಾತಿ ಪತ್ರ ಪಡೆದು ಜೆರಾಕ್ಸ್ ಪ್ರತಿಯನ್ನು, ಇತ್ತೀಚಿನ ಭಾವಚಿತ್ರಗಳನ್ನು ಲಗತ್ತಿಸಬೇಕೆಂದು ತಾಲೂ ಕು ಸಮಾಜ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ವಿಜಯಕುಮಾರ್ ತಾಲೂಕಿಗೆ ಪ್ರಥಮ
ತಿಪಟೂರು: ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿ ವಿಜಯಕುಮಾರ್ ಒಟ್ಟು 567 (ಶೇ.95) ಅಂಕಗಳನ್ನು ಪಡೆಯುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾನೆ. ನಗರದ ಕೆ.ಐ.ಟಿ.ಕಾಲೇಜಿನ ಲ್ಯಾಬ್ ಟೆಕ್ನೀಷಿಯನ್ ಪ್ರಕಾಶ್ ಮತ್ತು ವನಿತಾ ಅವರ ಮಗನಾದ ವಿಜಯಕುಮಾರ್ ಕನ್ನಡದಲ್ಲಿ 95, ಇಂಗ್ಲಿಷ್ 95, ಭೌತಶಾಸ್ತ್ರ 100, ರಸಾಯನ ಶಾಸ್ತ್ರ 99, ಗಣಿತಶಾಸ್ತ್ರ 88 ಮತ್ತು ಜೀವಶಾಸ್ತ್ರದಲ್ಲಿ 94 ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾನೆ. ಪತ್ರಿಕೆಯೊಂದಿಗೆ ಮಾತನಾಡಿದ ವಿಜಯಕುಮಾರ್ ನನ್ನ ಈ ಸಾಧನೆಗೆ ಪೋಷಕರು ನೀಡಿದ ಸಹಕಾರ ಮತ್ತು ಉಪನ್ಯಾಸಕರಾದ ಯೋಗೀಶ್, ಪ್ರಸನ್ನಕುಮಾರ್, ಕೆ.ರಮೇಶ್ ಹಾಗೂ ಪ್ರೊ.ಆರಾಧ್ಯ ಅವರ ಸಹಕಾರ ಮರೆಯುವಂತಿಲ್ಲ ಎಂದರು.  ಎಂಜಿನಿಯರಿಂಗ್ ಆಗಬೇಕೆಂಬ ಮಹಾದಾಸೆಯನ್ನು ವ್ಯಕ್ತಪಡಿಸಿದ್ದಾನೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement