ದೊಡ್ಡಹಳ್ಳಿ ಮೊರಾರ್ಜಿ ವಸತಿ ಶಾಲೆಗೆ ಶೇ.100
ಪಾವಗಡ: ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ದೊಡ್ಡಹಳ್ಳಿ ಮೊರಾರ್ಜಿ ವಸತಿ ಶಾಲೆಗೆ ಶೇ.100ರಷ್ಟು ಫಲಿತಾಂಶ ಬಂದಿದೆ. ಈ ಶಾಲೆಯಲ್ಲಿ ಈ ಸಾಲಿಗೆ 49 ಮಂದಿ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದು ಪ್ರಥಮ ಶ್ರೇಣಿಯಲ್ಲಿ 33 ಮಂದಿ ಪಾಸಾಗಿ ದ್ವಿತೀಯ ಶ್ರೇಣಿಯಲ್ಲಿ 10 ಹಾಗೂ ತ್ರತೀಯ ಶ್ರೇಣಿಯಲ್ಲಿ 6 ಮಂದಿ ಪಾಸಾಗಿದ್ದಾರೆ.
ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ದಾಖಲೆ ನಿರ್ಮಿಸಿದ ಮೊರಾರ್ಜಿ ವಸತಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಮುಖ್ಯೋಪಾಧ್ಯಾಯ ಹಾಗೂ ನಿಲಯ ಪಾಲಕ ನಾಗರಾಜ್ ಅಭಿನಂದಿಸಿದ್ದಾರೆ.